ಶ್ರೀಮಂಗಲ, ಫೆ. ೨೦: ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವರಾಜ್ (೨೫) ಮತ್ತು ಪತ್ನಿ ಶಿಲ್ಪಾ (೨೨) ಬಿರುನಾಣಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಿವಮೊಗ್ಗ ಮೂಲದ ಇವರು ಕಳೆದ ೧೦ ತಿಂಗಳ ಹಿಂದೆ ಮದುವೆಯಾಗಿದ್ದರು.
(ಮೊದಲ ಪುಟದಿಂದ) ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಕರ್ತವ್ಯ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ವೇಲ್ನಿಂದ ಬಾತ್ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮನೆ ಮಾಲೀಕ ಸತ್ಯ ಅವರನ್ನು ಕರೆದು
ಮೃತದೇಹವನ್ನು ಇಬ್ಬರು ಸೇರಿ ಇಳಿಸಿದ್ದಾರೆ. ಈ ಸಂದರ್ಭ ಸಂಬAಧಿಕರಿಗೆ ದೂರವಾಣಿ ಕರೆಮಾಡಿ ವಿಷಯವನ್ನು ಯುವರಾಜ್ ತಿಳಿಸಿದ್ದಾನೆ. ಸ್ವಲ್ಪದರಲ್ಲೇ ಯುವರಾಜ್ ಸಹ ಬಾತ್ ರೂಮ್ಗೆ ಹೋಗಿ ಪತ್ನಿ ನೇಣು ಬಿಗಿದು ಕೊಂಡಿದ್ದ ವೇಲ್ನಿಂದ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಕೊಡಗು ವನ್ಯಜೀವಿ ಎ.ಸಿ.ಎಫ್. ದಯಾನಂದ್, ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿದರು.