ಮಡಿಕೇರಿ, ಫೆ. ೨೧: ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆ ನಿಗದಿಯಾಗಿದ್ದು ಸಂಘದ ಸದಸ್ಯರಲ್ಲಿ ಪ್ರಸ್ತುತ ಚುನಾವಣೆಯ ಬಿರುಸು ಆರಂಭಗೊAಡಿದೆ. ತಾ. ೨೭ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಕಣ ಸಿದ್ಧಗೊಂಡಿದೆ. ಈ ಬಾರಿ ಎರಡು ಗುಂಪುಗಳು ಸ್ಪರ್ಧೆಗೆ ಇಳಿದಿದ್ದು ಸಹಜವಾಗಿಯೇ ಚುನಾವಣಾ ಕಣ ರಂಗೇರುತ್ತಿದೆ. ಎರಡೂ ಗುಂಪುಗಳ ನಡುವೆ ಪ್ರಬಲ ಸ್ಪರ್ಧೆ ಕಂಡುಬAದಿದ್ದು ಸ್ಪರ್ಧಿಸಿರುವ ಅಭ್ಯರ್ಥಿಗಳು ಸದಸ್ಯ ಮತದಾರರ ಬಳಿ ಬಿರುಸಿನ ಪ್ರಚಾರವನ್ನೂ ಪ್ರಾರಂಭಿಸಿದ್ದಾರೆ. ನಾಮಪತ್ರ ಹಿಂಪಡೆಯಲು ತಾ. ೧೯ ಕೊನೆಯ ದಿನವಾಗಿದ್ದು ಪ್ರಮುಖ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಯಾರೂ ಹಿಂಪಡೆಯದ ಕಾರಣ ಚುನಾವಣೆ ಅನಿವಾರ್ಯವಾಗಿದೆ.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಕುಡೆಕಲ್ ಸಂತೋಷ್ ಹಾಗೂ ಸವಿತಾ ರೈ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಲೋಕೇಶ್ ಸಾಗರ್, ಎಸ್.ಎ. ಮುರಳೀಧರ್, ಪಾರ್ಥ ಚಿಣ್ಣಪ್ಪ, ಹೆಚ್.ಕೆ. ಜಗದೀಶ್, ಬಿ.ಜಿ. ಮಂಜು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ವಿ. ರವಿಕುಮಾರ್, ಅನುಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದುಗ್ಗಳ ಸದಾನಂದ, ಟಿ.ಕೆ. ಸಂತೋಷ್, ಹೆಚ್.ಬಿ. ಯಶೋಧ, ಎ.ಎನ್. ವಾಸು, ಪ್ರೇಮ್‌ಕುಮಾರ್, ಖಜಾಂಚಿ ಸ್ಥಾನಕ್ಕೆ ಉಜ್ವಲ್‌ರಂಜಿತ್, ಪಿ.ಎ. ಆನಂದ, ರಾಜ್ಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ತೇಲಪಂಡ ಕವನ್ ಕಾರ್ಯಪ್ಪ, ಟಿ.ಎನ್. ಮಂಜುನಾಥ್ ಸ್ಪರ್ಧಿಸಿದ್ದು, ಉಳಿದಂತೆ ೧೫ ನಿರ್ದೇಶಕ ಸ್ಥಾನಕ್ಕೆ ೨೭ ಮಂದಿ ಕಣದಲ್ಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಕೊಡಗು ಜಿಲ್ಲೆಯಿಂದ ಅಜ್ಜಮಾಡ ರಮೇಶ್ ಕುಟ್ಟಪ್ಪ ಸ್ಪರ್ಧಿಸುತ್ತಿದ್ದಾರೆ.