ಸುಂಟಿಕೊಪ್ಪ, ಫೆ. ೨೦: ಜಿಲ್ಲಾ ಕಾರ್ಮಿಕ ಮತ್ತು ವಾಹನ ಚಾಲಕರ ಸಂಘದ ಸದಸ್ಯ ಸುರೇಶ್ (ಮೈನಾ) ಎಂಬವರು ಆಕಾಲಿಕ ಮರಣಕ್ಕೀಡಾಗಿದ್ದು ಸಂಘದ ವತಿಯಿಂದ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ, ಧನ ಸಹಾಯ ನೀಡಲಾಯಿತು.

ತಾ. ೧೫ ರಂದು ಆಕಾಲಿಕ ಮರಣಕ್ಕೆ ತುತ್ತಾದ ಸುರೇಶ್ ಮನೆಗೆ ಭೇಟಿ ನೀಡಿದ ಸಂಘದ ಸ್ಥಾಪಕ ಅಧ್ಯಕ್ಷ ಅಣ್ಣಾ ಶರೀಫ್, ಅಧ್ಯಕ್ಷ ರಫೀಕ್ ಹಾಗೂ ಪದಾಧಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿ ಸಂಘದ ವತಿಯಿಂದ ರೂ. ೧೩,೦೦೦ ಮೊತ್ತವನ್ನು ನೀಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷರುಗಳಾದ ಮಹೇಶ್, ಜೋಸೆಫ್, ಮಾಜಿ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ವಿವೇಕ್ ರೈ, ಸಲಹೆಗಾರರಾದ ಪಿ.ಆರ್. ಸುನಿಲ್‌ಕುಮಾರ್, ಸಹಕಾರ್ಯದರ್ಶಿ ಮಂಜು ಹಾಗೂ ಪದಾಧಿಕಾರಿಗಳು ಇದ್ದರು.