ಮಡಿಕೇರಿ, ಫೆ.೨೦: ಮೊಗೇರ ಜನಾಂಗದ ಪ್ರಾಚೀನ ಜನಪದ ಕಲೆಯಾಗಿರುವ ಮೊಗೇರರ ದುಡಿಕುಣಿತ ತರಬೇತಿ ಶಿಬಿರ ತಾ. ೨೪ ಮತ್ತು ೨೫ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ. ರವಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ನಗರದ ಕೋಟೆ ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ಎರಡು ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ.

‘ದುಡಿ’ ಮೊಗೇರ ಜನಾಂಗದ ಕುಲ ಲಾಂಛನವಾಗಿದ್ದು, ಮೊಗೇರ ಜನಾಂಗದ ಅವಿಭಾಜ್ಯ ಅಂಗವಾಗಿದೆ. ಮೊಗೇರರ ದುಡಿಕುಣಿತ, ವಿವಾಹ, ದೈವರಾಧನೆ ಸೇರಿದಂತೆ ಶುಭ ಕಾರ್ಯಗಳಿಗೆ ಬಳಸುವ ಜನಾಂಗದ ಮಾಧ್ಯಮವಾಗಿದೆ. ಶಿವರಾಮ ಕಾರಂತರ ಚೋಮನ ದುಡಿ ಮತ್ತು ಕೊಯಿರ ಬಾಳೆಪುಣಿಯವರ ‘ದುಡಿಕುಣಿತ’ ಹಾಗೆಯೇ ಡಾ. ಅಭಯ್ ಕುಮಾರ್ ಕೌಕ್ರಡಿಯವರ ಮೊಗೇರರ ಸಾಂಸ್ಕöÈತಿಕ ಅಧÀ್ಯಯನ ಗ್ರಂಥಗಳಿAದ ದುಡಿಕುಣಿತಕ್ಕೆ ಸಾಕಷ್ಟು ಮಹತ್ವ ಮತ್ತು ಪ್ರಚಾರ ದೊರೆಕಿದೆ.

ಜಿಲ್ಲೆಯಲ್ಲಿ ದುಡಿಕುಣಿತದ ಮಹತ್ವ ಹಾಗೂ ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಣಿತರಿಂದ ತರಬೇತಿ ನೀಡಲಾಗು ವುದು. ಹೆಚ್ಚಿನ ಮಾಹಿತಿಗೆ ೯೯೭೨೦೭೩೨೯೫ ಸಂಪರ್ಕಿಸುವAತೆ ತಿಳಿಸಿದ್ದಾರೆ.