ಕೂಡಿಗೆ, ಫೆ. ೨೦: ಸೋಮವಾರಪೇಟೆ ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ವತಿಯಿಂದ ಅಮೃತ ಸಿರಿ ಯೋಜನೆ ಅಡಿಯಲ್ಲಿ ಸೋಮವಾರಪೇಟೆ ತಾಲೂಕಿನ ೧೫ ಮಂದಿ ಮಹಿಳಾ ಫಲಾನುಭವಿಗಳಿಗೆ ಕೂಡಿಗೆ ಜರ್ಸಿ ತಳಿ ಸಂವರ್ಧನ ಕೇಂದ್ರದ ಆವರಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಸುಗಳನ್ನು ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಮಹಿಳೆಯರು ಸರಕಾರದ ಹೊಸ ಯೋಜನೆಯಾದ ಅಮೃತ ಸಿರಿ ಯೋಜನೆ ಸೌಲಭ್ಯಗಳನ್ನು ಪಡೆದ ಹಸುಗಳ ಸಾಕಿ ಉತ್ಪಾದಕ ಸಹಕಾರಿ ಸಂಘಗಳಿಗೆ ಹಾಲು ಮಾರಾಟ ಮಾಡುವ ಮೂಲಕ ಅರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.

ಅರ್ಥಿಕವಾಗಿ ಹಿಂದುಳಿದ ೧೫ ಮಹಿಳೆಯರಿಗೆ ಹಸುಗಳನ್ನು ಪ್ರಥಮ ಹಂತವಾಗಿ ವಿತರಣೆ ಮಾಡಲಾಯಿತು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಪಟ್ಟಣ ಪಂಚಾಯಿತಿ ಸದಸ್ಯ ಮನುಕುಮಾರ್, ಕುಶಾಲನಗರ ಬಿಜೆಪಿ ನಗರ ಅಧ್ಯಕ್ಷ ಉಮಾ ಶಂಕರ್, ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಾದಾಮಿ, ಕೂಡಿಗೆ ಕೇಂದ್ರದ ಪಶುವೈದ್ಯ ಪರಿವೀಕ್ಷಕರಾದ ಸುಗುಣಾನಂದ, ಭಾನುಮತಿ (ಭವ್ಯ) ಸೇರಿದಂತೆ ಇನ್ನಿತರರು ಹಾಜರಿದ್ದರು.