ಚೆಟ್ಟಳ್ಳಿ, ಫೆ. ೧೯: ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಅಮ್ಮತ್ತಿಯ ಫ್ರೌಡಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ನೇತಾಜಿ ಯುವಕ ಸಂಘ ಕೊಡಗರಹಳ್ಳಿ, ಶೈನಿಂಗ್ ಬರ್ಡ್ ಎಫ್.ಸಿ ಪಾಲಿಬೆಟ್ಟ, ಸಹರಾ ಯುನೈಟೆಡ್ ಒಂಟಿಯAಗಡಿ, ಹಾಗೂ ಅಮಿಟಿ ಯುನೈಟೆಡ್ ಗದ್ದೆಹಳ್ಳ ಸೆಮಿಫೈನಲ್ ಅಂತಕ್ಕೆ ತಲುಪಿದೆ.

ಮೊದಲ ಸೆಮಿಫೈನಲ್ ಪಂದ್ಯವು ನೇತಾಜಿ ಎಫ್.ಸಿ ಹಾಗೂ ವೈಷÀ್ಣವಿ ಮರಗೋಡು ಎಫ್.ಸಿ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ೧-೧ ಗೋಲುಗಳಿಂದ ಎರಡು ತಂಡಗಳು ಸಮಬಲ ಸಾಧಿಸಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ನೇತಾಜಿ ಯುವಕ ಸಂಘ ೪-೩ ಗೋಲುಗಳಿಂದ ವೈಷ್ಣವಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಶೈನಿಂಗ್ ಬರ್ಡ್ ತಂಡವು ೩-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.

ತೃತೀಯ ಸೆಮಿಫೈನಲ್ ಪಂದ್ಯ ದಲ್ಲಿ ಸಹರಾ ಎಫ್.ಸಿ ಒಂಟಿಯAಗಡಿ ತಂಡವು ೧-೦ ಗೋಲುಗಳ ಅಂತರದಿAದ ಮಿಲನ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.

ನಾಲ್ಕನೇ ಸೆಮಿಫೈನಲ್ ಪಂದ್ಯವು ಅಮಿಟಿ ಯುನೈಟೆಡ್ ಎಫ್.ಸಿ ಗದ್ದೆಹಳ್ಳ ಹಾಗೂ ಕುಶಾಲನಗರ ಎಫ್.ಸಿ ತಂಡಗಳ ನಡುವೆ ನಡೆಯಿತು. ೧-೧ ಗೋಲುಗಳಿಂದ ಎರಡು ತಂಡಗಳು ಸಮಬಲ ಸಾಧಿಸಿ, ಪೆನಾಲ್ಟಿ ಶೂಟೌಟ್ ನಲ್ಲಿ ಅಮಿಟಿ ಯುನೈಟೆಡ್ ತಂಡ ೨-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ತಾ. ೨೦ರಂದು (ಇಂದು) ಸೆಮಿಫೈನಲ್ ಪಂದ್ಯಾಟ ನಡೆಯಲಿದೆ.

ತೀರ್ಪುಗಾರರಾಗಿ ಇಬ್ರಾಹಿಂ ಎಂ. ಧೀರಜ್ ರೈ, ಇಸ್ಮಾಯಿಲ್ ಹಾಗೂ ದರ್ಶನ್ ಕಾರ್ಯ ನಿರ್ವಹಿಸಿದರು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ