*ಗೋಣಿಕೊಪ್ಪ, ಫೆ. ೨೦: ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯನ್ನು ಗೋಣಿಕೊಪ್ಪಲು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಚರಿಸಲಾಯಿತು.
ಬಸ್ ನಿಲ್ದಾಣದ ಸಮೀಪದಲ್ಲಿನ ಧ್ವಜ ಕಂಬದ ಎದುರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ನೂತನ ಭಗವಾಧ್ವ್ವಜವನ್ನು ಏರಿಸಿ ಧ್ವಜನಮನ ಸಲ್ಲಿಸಿದರು. ನಂತರ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಹಾದಿಯ ಬಗ್ಗೆ ಓ.ಬಿ.ಸಿ. ಘಟಕದ ಜಿಲ್ಲಾ ಸದಸ್ಯ ಸುಬ್ರಮಣಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯರುಗಳಾದ ಕೊಣಿಯಂಡ ಬೋಜಮ್ಮ, ಗೀತಾ, ಸೌಮ್ಯ ಬಾಲು, ಪುಷ್ಪಾ ಮನೋಜ್, ಗೋಣಿಕೊಪ್ಪಲು ಶಕ್ತಿ ಕೇಂದ್ರದ ಪ್ರಮುಖ್ ಮಂಜು ಸುರೇಶ್ ರೈ, ತಾಲೂಕು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ವಿವೇಕ್ ರಾಯ್ಕರ್, ಯುವ ಮೋರ್ಚಾ ನಗರ ಅಧ್ಯಕ್ಷ ಜಯಶಂಕರ್ ಹಾಗೂ ಮಂಜು, ಜ್ಯೋತಿ, ಸುರೇಶ್, ಪ್ರವೀಣ್ ಪೂಜಾರಿ, ಚಿಮ್ಮ ಇದ್ದರು.