ವೀರಾಜಪೇಟೆ, ಫೆ. ೨೦: ಎಸ್.ಕೆ.ಎಸ್.ಎಸ್.ಎಫ್. ಸಂಸ್ಥೆಯು ೩೩ನೇ ಸ್ಥಾಪನಾ ದಿನದ ಅಂಗವಾಗಿ ವೀರಾಜಪೇಟೆಯ ಸಂಸ್ಥೆಯಲ್ಲಿ ಶಾಖೆಯ ಪದಾಧಿಕಾರಿಗಳು ಧ್ವಜಾರೋಹಣ ಮಾಡಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಎಸ್.ಕೆ.ಎಸ್.ಎಸ್.ಎಫ್.ನ ಕಾರ್ಯದರ್ಶಿ ರಫೀಕ್ ಸಿ.ಹೆಚ್. ಮಾತನಾಡಿ, ಸಂಸ್ಥೆ ವತಿಯಿಂದ ಸುಮಾರು ೨೫ಕ್ಕೂ ಹೆಚ್ಚು ಉಚಿತವಾಗಿ ಮದುವೆ ಕಾರ್ಯವನ್ನು ನಡೆಸಿಕೊಟ್ಟಿದ್ದೇವೆ. ಪ್ರತಿ ತಿಂಗಳು ಬಡ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಿದ್ದೇವೆ. ಅನಾರೋಗ್ಯ ಪೀಡಿತ ೬ ರಿಂದ ೭ ಕುಟುಂಬಗಳಿಗೆ ಪ್ರತಿ ತಿಂಗಳು ವೈದ್ಯೋಪಾಚಾರ, ಔಷಧಿ ನೀಡುತ್ತಾ ಕಷ್ಟದಲ್ಲಿ ಇರುವ ಮೊಹಲ್ಲಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೇ ಬೇಕಾಗುವಂತಹ ಧನ ಸಹಾಯವನ್ನು ಸಂಸ್ಥೆಯ ವತಿಯಿಂದ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭ ಎಸ್.ಕೆ.ಎಸ್. ಎಸ್.ಎಫ್. ಅಧ್ಯಕ್ಷ ನೌಫಲ್ ಸಿ.ಹೆಚ್., ಕಾರ್ಯದರ್ಶಿ ರಿಜ್ವಾನ್ ಕೆ.ಎ., ಅರ್ಬಾಜ್, ತುಫೈರ್, ಹಸೈನಾರ್, ಮದ್ರಸದ ಪ್ರಧಾನ ಅಧ್ಯಾಪಕ ಮತ್ತು ಅಬ್ದುಲ್ ಉಸ್ತಾದ್, ಕಮಿಟಿ ಪ್ರತಿನಿಧಿಗಳಾದ ಶಾಫಿ, ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಜಾಕ್, ಮುಸ್ತಫಾ, ಟಾಪ್ ಕೋ ಕಾರ್ಯದರ್ಶಿ ಅಲಿ ಸಿ.ಹೆಚ್. ಉಪಸ್ಥಿತರಿದ್ದರು.