ಮಡಿಕೇರಿ, ಫೆ. ೧೯: ನಗರಸಭೆ ವತಿಯಿಂದ ಇಂದು ೨೦೨೨-೨೩ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಆರಂಭಿಕ ಶಿಲ್ಕು ೭,೫೦,೦೫,೦೦೦ ದೊಂದಿಗೆ ೧೧೮,೭೧,೧೦,೦೦೦ ಆದಾಯದ ನಿರೀಕ್ಷೆಯೊಂದಿಗೆ, ೧೨೬,೨೧,೧೫,೦೦೦ ಒಟ್ಟು ಸಂಗ್ರಹ ಹಾಗೂ ೧೨೧,೨೧,೧೫,೦೦೦ ನಿರೀಕ್ಷಿತ ಖರ್ಚಿನೊಂದಿಗೆ ೫ ಕೋಟಿಯ ಉಳಿತಾಯ ಬಜೆಟ್ ಮಂಡಿಸ ಲಾಯಿತು. ಶಾಸಕ ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಬಜೆಟ್ ಮಂಡನೆ ಮಾಡಿದರು.
ಪ್ರಮುಖ ಆದಾಯಗಳು
ಆಸ್ತಿ ತೆರಿಗೆ ಮತ್ತು ಆಸ್ತಿ ತೆರಿಗೆ ದಂಡ ರೂ. ೩.೦೩ ಕೋಟಿ, ನೀರಿನ ಶುಲ್ಕಗಳು ಮತ್ತು ಠೇವಣಿ ರೂ. ೧.೦೪ ಕೋಟಿ, ಮಳಿಗೆಗಳ ಬಾಡಿಗೆ ರೂ. ೧ ಕೋಟಿ, ರಾಜಾಸೀಟ್ ಹಾಗೂ ಬಸ್ ಸ್ಟಾö್ಯಂಡ್ಗಳ ಹರಾಜು ರೂ. ೧ ಕೋಟಿ, ಉದ್ದಿಮೆ ಪರವಾನಗಿ, ಇತರೆ ಪರವಾನಿಗೆ ಶುಲ್ಕಗಳು ಮತ್ತು ದಂಡಗಳು ರೂ. ೩೦ ಲಕ್ಷ, ಕಟ್ಟಡ ಪರವಾನಗಿ ಮತ್ತು ಅಭಿವೃದ್ಧಿ ಶುಲ್ಕಗಳು ರೂ. ೨೭.೫೦ ಲಕ್ಷ, ವಾಹನ ನಿಲುಗಡೆ ಶುಲ್ಕಗಳು ರೂ. ೧೦ ಲಕ್ಷ, ಮಾರುಕಟ್ಟೆ ಶುಲ್ಕಗಳು, ನೆಲ ಬಾಡಿಗೆ ರೂ. ೭.೫ ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕಗಳು ರೂ. ೨.೫ ಲಕ್ಷ, ಘನ ತ್ಯಾಜ್ಯ ವಸ್ತು ನಿರ್ವಹಣೆ ಉಪಕರ ರೂ. ೨೫ ಲಕ್ಷ, ಸ್ಟಾö್ಯಂಪ್ ಶುಲ್ಕಗಳು ರೂ. ೨ ಲಕ್ಷ, ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ ರೂ. ೭.೫ ಲಕ್ಷ, ಜಾಹೀರಾತು ತೆರಿಗೆ ರೂ. ೨ ಲಕ್ಷ, ಖಾತಾಪ್ರತಿಗಳ ಶುಲ್ಕ, ಖಾತಾ ಬದಲಾವಣೆ ಶುಲ್ಕಗಳು ರೂ. ೧೧ ಲಕ್ಷ, ವಾಹನಗಳ ಬಾಡಿಗೆ, ರಸ್ತೆ ಅಗೆತ ಶುಲ್ಕಗಳು, ಅನುಪಯುಕ್ತ ವಸ್ತುಗಳ ಮಾರಾಟ ರೂ. ೭ ಲಕ್ಷ, ಟೆಂಡರ್ ಫಾರಂಗಳ ಮಾರಾಟ, ಉಪಕರ ಸಂಗ್ರಹಣೆ ಶುಲ್ಕಗಳು, ಇತರೆ ಪ್ರಮಾಣ ಪತ್ರಗಳು ಮತ್ತು ಪ್ರತಿಗಳ ಶುಲ್ಕಗಳು ಜನನ - ಮರಣ ಪ್ರಮಾಣ ಪತ್ರಗಳ ಶುಲ್ಕಗಳು,
(ಮೊದಲ ಪುಟದಿಂದ) ನೋಂದಾವಣೆ ಶುಲ್ಕಗಳು, ಸಭಾಂಗಣಗಳಿAದ ಬಂದ ಬಾಡಿಗೆ, ಇತರೆ ಶುಲ್ಕಗಳು ರೂ. ೨೦.೯೫ ಲಕ್ಷ.
ನಿರೀಕ್ಷಿತ ಅನುದಾನಗಳು
೧೫ನೇ ಹಣಕಾಸು ಅನುದಾನ ರೂ. ೧.೪೮ ಕೋಟಿ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನ ರೂ. ೪೬ ಲಕ್ಷ, ಎಸ್.ಎಫ್.ಸಿ. ವೇತನ ಅನುದಾನ ರೂ. ೩.೫೦ ಕೋಟಿ, ಎಸ್.ಎಫ್.ಸಿ. ವಿದ್ಯುತ್ ಅನುದಾನ ರೂ. ೩.೭೨ ಕೋಟಿ, ಮಳೆಹಾನಿ ಅನುದಾನ ರೂ. ೧ ಕೋಟಿ, ಕುಡಿಯುವ ನೀರಿನ ಅನುದಾನ ರೂ. ೨೦ ಲಕ್ಷ, ಎಸ್.ಎಫ್.ಸಿ. ವಿಶೇಷ ಅನುದಾನ ರೂ. ೧ ಕೋಟಿ, ಎಸ್.ಎಫ್.ಸಿ. ಪ್ರೋತ್ಸಾಹಧನ ಅನುದಾನ, ಇತರೆ ಅನುದಾನ ರೂ. ೩೫ ಲಕ್ಷ, ಪೌರಕಾರ್ಮಿಕ ಗೃಹಭಾಗ್ಯ ಅನುದಾನ ರೂ. ೧೫ ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನ ರೂ. ೨೫ ಲಕ್ಷ, ನಲ್ಮ್ ಅನುದಾನ ರೂ. ೧೦ ಲಕ್ಷ, ಎಂ.ಎಲ್.ಎ. ಅನುದಾನ ರೂ. ೫ ಕೋಟಿ, ವಿಶೇಷ ಅನುದಾನ ರೂ. ೪೦ ಕೋಟಿ.
ಪ್ರಮುಖ ವೆಚ್ಚಗಳು
ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ ರೂ. ೧.೭೫ ಕೋಟಿ, ಕಚೇರಿ ಉಪಕರಣಗಳು, ಸಲಕರಣೆಗಳು, ಪಿಠೋಪಕರಣ ಗಳಿಗಾಗಿ ರೂ. ೩೫ ಲಕ್ಷ, ವಾಣಿಜ್ಯ ಮಳಿಗೆ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ ರೂ. ೧ ಕೋಟಿ, ಸ್ವಾಗತ ಕಮಾನು, ಕಾಂಪೌAಡ್, ರಸ್ತೆ ಬದಿ ಮಾರ್ಗಸೂಚಿ ಫಲಕಗಳ ಅಳವಡಿಕೆ ಹಾಗೂ ತಂತಿ ಬೇಲಿ ಕಾಮಗಾರಿಗಾಗಿ ರೂ. ೧ ಕೋಟಿ, ಸಮುದಾಯ ಭವನ ಕಾಮಗಾರಿಗಾಗಿ ರೂ. ೧ ಕೋಟಿ, ಕಾವೇರಿ ಕಲಾಕ್ಷೇತ್ರ ಕಾಮಗಾರಿಗಾಗಿ ರೂ. ೧೦ ಕೋಟಿ, ರಸ್ತೆ, ಪಾದಚಾರಿ ರಸ್ತೆ, ತಡೆಗೋಡೆ ಮತ್ತು ಚರಂಡಿ ಅಭಿವೃದ್ಧಿಗಾಗಿ ರೂ. ೨೦ ಕೋಟಿ, ಬೀದಿ ದೀಪ ಕಾಮಗಾರಿಗಾಗಿ ರೂ. ೧.೫ ಕೋಟಿ, ಸೇತುವೆ ಮತ್ತು ಮೇಲು ಸೇತುವೆ ಕಾಮಗಾರಿಗಾಗಿ ರೂ. ೫೦ ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿಗಾಗಿ ರೂ. ೧ ಕೋಟಿ, ಸಾರ್ವಜನಿಕರ ಶೌಚಾಲಯ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ ರೂ. ೫೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದ ಅಭಿವೃದ್ಧಿ ಮತ್ತು ಕಟ್ಟಡಗಳ ನಿರ್ಮಾಣ, ಒಣ ಕಸ ಸಂಗ್ರಹಣಾ ಕೇಂದ್ರ, ಬೃಹತ್ ಕಸದ ತೊಟ್ಟಿ ಖರೀದಿಗಾಗಿ ರೂ. ೨.೧೦ ಕೋಟಿ, ನೈರ್ಮಲ್ಯ ವಾಹನಗಳ ಖರೀದಿಗಾಗಿ, ಸಲಕರಣೆ ಖರೀದಿಗಾಗಿ ರೂ. ೧.೭೦ ಕೋಟಿ, ಬಸ್ ನಿಲ್ದಾಣ ನಿರ್ಮಾಣ ಅಭಿವೃದ್ಧಿಗಾಗಿ ರೂ. ೨೫ ಲಕ್ಷ, ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಗಾಗಿ ರೂ. ೫೦ ಲಕ್ಷ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಾಗಿ ರೂ. ೩೦ ಲಕ್ಷ, ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗಾಗಿ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ ರೂ. ೬ ಕೋಟಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗಾಗಿ ರೂ. ೫೦ ಲಕ್ಷ, ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಾಗಿ ರೂ. ೧ ಕೋಟಿ, ಪಾರ್ಕ್ ಅಭಿವೃದ್ಧಿ ಕಾಮಗಾರಿಗಾಗಿ ರೂ. ೫೦ ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದ ವರ್ಗ, ವಿಶೇಷಚೇತನರ ಅಭಿವೃದ್ಧಿಗಾಗಿ ರೂ. ೫೦ ಲಕ್ಷ (ಕಾಮಗಾರಿಗಳು ರೂ. ೨೯ ಲಕ್ಷ, ವೈಯಕ್ತಿಕ ಸೌಲಭ್ಯಗಳು ರೂ. ೨೧ ಲಕ್ಷ, ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳ ಪಾವತಿಗಾಗಿ ರೂ. ೩.೫೦ ಕೋಟಿ, ವಿದ್ಯುತ್ ಶುಲ್ಕಗಳು - ಬೀದಿ ದೀಪ ಮತ್ತು ನೀರು ಸರಬರಾಜು ರೂ. ೩.೭೨ ಕೋಟಿ, ಶಿಕ್ಷಕರ ಗೌರವಧನ ರೂ. ೫ ಲಕ್ಷ, ಕೌನ್ಸಿಲ್ ಸಭೆಯ ಉಪಹಾರ ರೂ. ೫ ಲಕ್ಷ, ದುರಸ್ತಿ ಮತ್ತು ನಿರ್ವಹಣೆ - ಶಾಲಾ ಅಭಿವೃದ್ಧಿ ರೂ. ೫೦ ಲಕ್ಷ, ಸ್ವಚ್ಛ ಭಾರತ, ಪೌರಕಾರ್ಮಿಕ ಗೃಹಭಾಗ್ಯ, ನಲ್ಮ್ ಅನುಷ್ಠಾನ ವೆಚ್ಚಗಳು ರೂ. ೨೫ ಲಕ್ಷ, ನೈರ್ಮಲ್ಯ ಹೊರಗುತ್ತಿಗೆ ನಿರ್ವಹಣೆ, ನೈರ್ಮಲ್ಯ ದಾಸ್ತಾನು, ವಾಹನಗಳ ಬಾಡಿಗೆ, ನೈರ್ಮಲ್ಯ ವಾಹನಗಳ ರಿಪೇರಿ, ವಿಮೆಗಳು, ಉಪಕರಣಗಳ ದುರಸ್ತಿ, ಇಂಧನ ವೆಚ್ಚಗಳಿಗಾಗಿ ರೂ. ೨.೨೩ ಕೋಟಿ, ಬೀದಿ ದೀಪ ಹೊರಗುತ್ತಿಗೆ ನಿರ್ವಹಣೆ, ಬೀದಿ ದೀಪ ರಿಪೇರಿ ವೆಚ್ಚಗಳಿಗಾಗಿ ರೂ. ೪೦ ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ನಿರ್ವಹಣೆ ವೆಚ್ಚಗಳು, ದುರಸ್ತಿ ಮತ್ತು ನಿರ್ವಹಣೆ, ನೀರು ಸರಬರಾಜು ಇಂಧನ ವೆಚ್ಚಗಳು, ನೀರು ಸರಬರಾಜು ದಾಸ್ತಾನು, ಟ್ಯಾಂಕರ್ ಮೂಲಕ ನೀರು ಸರಬರಾಜು ವೆಚ್ಚಗಳಿಗಾಗಿ ರೂ. ೧.೫೧ ಕೋಟಿ, ಕಟ್ಟಡಗಳ ದುರಸ್ತಿಗಳು, ನಾಗರಿಕ ವಿನ್ಯಾಸಗಳ ದುರಸ್ತಿಗಳು, ರಸ್ತೆ ಮತ್ತು ಚರಂಡಿ ದುರಸ್ತಿಗಳು, ಸೇತುವೆಗಳ ದುರಸ್ತಿಗಳು, ಮಳೆನೀರು ಚರಂಡಿ ಹಾಗೂ ಕಲ್ವರ್ಟ್ಸ್ ದುರಸ್ತಿಗಳು, ಸಾರ್ವಜನಿಕ ಶೌಚಾಲಯಗಳ ದುರಸ್ತಿಗಳು, ಒಳಚರಂಡಿ ದುರಸ್ತಿ, ಸ್ಮಶಾನಗಳ ದುರಸ್ತಿಗಳು, ಪಾರ್ಕ್ ದುರಸ್ತಿ ವೆಚ್ಚಗಳಿಗಾಗಿ ರೂ. ೧.೦೫ ಕೋಟಿ, ಬಾಡಿಗೆ ಮತ್ತು ವಿಮೆಗಳು, ಪ್ರಯಾಣ ಮತ್ತು ವಾಹನ ಭತ್ಯೆ, ಹೊರಗುತ್ತಿಗೆ ವೆಚ್ಚಗಳು - ಕಾರು, ಕಾರ್ಯಕ್ರಮ ವೆಚ್ಚಗಳು, ದೇಣಿಗೆಗಳು, ವಂತಿಗೆಗಳು, ಚುನಾವಣೆ ವೆಚ್ಚಗಳು, ವೃತ್ತಿಪರ ಫೀಗಳು, ಜಾಹೀರಾತು ವೆಚ್ಚಗಳು, ಕಚೇರಿ ವೆಚ್ಚಗಳು, ಲೇಖನ ಸಾಮಗ್ರಿಗಳು, ಕಚೇರಿ ಉಪಕರಣಗಳ ದುರಸ್ತಿಗಳು, ಹೊರಗುತ್ತಿಗೆ ವೆಚ್ಚಗಳು, ಡಾಟಾ ಎಂಟ್ರಿ ಆಪರೇಟರ್, ಇತರೆ ಸಾಮಾನ್ಯ ವೆಚ್ಚಗಳು ರೂ. ೧.೫೧ ಕೋಟಿ, ಕೌನ್ಸಿಲ್ ಗೌರವಧನ ವೆಚ್ಚಗಳು, ಅಧ್ಯಯನ ಪ್ರವಾಸಕ್ಕಾಗಿ, ಇತರೆ ಕೌನ್ಸಿಲ್ ಸಂಬAಧಿತ ವೆಚ್ಚಗಳಿಗಾಗಿ ರೂ. ೨೮.೭೦ ಲಕ್ಷಗಳನ್ನು ನಗರಸಭೆಯ ೨೦೨೨-೨೩ನೆ ಸಾಲಿನ ಆಯ-ವ್ಯಯದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅನಿತಾ ಪೂವಯ್ಯ. ಪ್ರಕಟಿಸಿದರು. ನಗರಸಭಾ ಆಯುಕ್ತ ರಾಮದಾಸ್, ಉಪಾಧ್ಯಕ್ಷೆ ಸವಿತಾ ರಾಕೇಶ್ ಉಪಸ್ಥಿತರಿದ್ದರು.
ಆಡಳಿತ-ವಿಪಕ್ಷ ಸದಸ್ಯರ ವಾಗ್ವಾದ
ಆಯ ವ್ಯಯ ಮಂಡನೆ ಸಭೆಯ ಆರಂಭದಲ್ಲಿ ಮಾತನಾಡಿದ ವಿಪಕ್ಷ ಸದಸ್ಯ ಅಮಿನ್ ಮೊಯ್ಸಿನ್ ಈ ಸಭೆಯ ಬಗ್ಗೆ ಮೂರು ದಿನ ಮುಂಚಿತವಾಗಿ ಮಾಹಿತಿ ನೀಡಬೇಕಿತ್ತು. ಆದರೆ ಬಜೆಟ್ ಬಗ್ಗೆ ಅಧ್ಯಯನ ಮಾಡಲು ಕಾಲವಕಾಶ ನೀಡದ ರೀತಿಯಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿಯ ಕೆಲ ಸದಸ್ಯರು ಇಂದು ಬಜೆಟ್ ಮಂಡನಾ ಸಭೆಯಷ್ಟೆ ಆ ಕುರಿತ ಚರ್ಚೆಗಾಗಿ ಕರೆದಿರುವ ಸಭೆಯಲ್ಲ ಎಂದರು. ಕೇವಲ ಬಜೆಟ್ ಮಂಡನೆಗಾಗಿ ಮಾತ್ತ ಸಭೆ ಕರೆದರೂ ಮೂರು ದಿನ ಮುಂಚಿತವಾಗಿ ತಿಳಿಸಬೇಕಿತ್ತು ಎಂದು ಅಮೀನ್ ಮೊಯ್ಸಿನ್ ಹೇಳಿದರು. ಅಲ್ಲದೇ ಸಭಾ ನಡಾವಳಿಯಲ್ಲಿ ಬಜೆಟ್ ಮಂಡನೆ ಬದಲಾಗಿ ಬಜೆಟ್ ಮಂಜೂರಾತಿ ಸಭೆ ಎಂದು ತಪ್ಪಾಗಿ ಮುದ್ರಿತಗೊಂಡಿದೆ ಎಂದು ಹೇಳಿದರು. ಈ ವಿಚಾರವಾಗಿ ಉಮೇಶ್ ಸುಬ್ರಮಣಿ, ಮಹೇಶ್ ಜೈನಿ ಹಾಗೂ ಅಮೀನ್ ಮೊಯ್ಸಿನ್ ನಡುವೆ ವಾಗ್ವಾದ ನಡೆಯಿತು. ಮುದ್ರಣದಲ್ಲಿ ಆಗಿರುವ ತಪ್ಪನ್ನು ಅಧ್ಯಕ್ಷರು ಸರಿ ಮಾಡಿಕೊಂಡು ಇಂದು ಬಜೆಟ್ ಮಂಡಿಸುತ್ತಾರೆ ಅದಕ್ಕೆ ಅವಕಾಶ ಕೊಡಿ ಎಂದು ಕೆ.ಎಸ್. ರಮೇಶ್ ಮನವಿ ಮಾಡಿದರು. ಬಜೆಟ್ ಮಂಡನೆಗಾಗಿ ಸಭೆ ಕರೆಯಲಾಗಿದ್ದು, ಸಣ್ಣ ಪುಟ್ಟ ಲೋಪಗಳಿದ್ದರೆ ಸರಿಪಡಿಸಿಕೊಂಡು ಸಭೆ ನಡೆಸುವಂತಾಗಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಬಳಿಕ ಅಧ್ಯಕ್ಷೆ ಅನಿತಾ ಪೂವಯ್ಯ ಬಜೆಟ್ ಮಂಡಿಸಿದರು.
ವಿಪಕ್ಷ ಸದಸ್ಯರು ವಿನಾಕಾರಣ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಾರೆ ಎಂದು ಸದಸ್ಯ ಸತೀಶ್ ಅರೋಪಿಸಿದರು. ಆಡಳಿತ ಪಕ್ಷ ಸಮರ್ಪಕವಾಗಿ ಆಡಳಿತ ನಡೆಸಿದರೆ ಯಾವುದೇ ಗೊಂದಲ ಸೃಷ್ಟಿಸುವ ಅನಿವಾರ್ಯತೆ ನಮಗಿಲ್ಲ. ನಿಮ್ಮ ತಪ್ಪನ್ನು ಮೊದಲು ತಿದ್ದುಕೊಳ್ಳಿ ಎಂದು ಅಮಿನ್ ಮೊಯ್ಸಿನ್, ಮನ್ಸೂರ್ ಹೇಳಿದರು.