ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ಬ್ಯಾಟಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಸಭೆ ಶನಿವಾರ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ತಹಶೀಲ್ದಾರ್ ಗೋವಿಂದ್ರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಬಳೂರು ಹಾಗೂ ಶಿರಹ ಗ್ರಾಮಗಳಿಗೆ ಸಂಬAಧಿಸಿದ ರೈತರ ಸಮಸ್ಯೆ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿ ಖಾತೆ, ಆಧಾರ್ ಕಾರ್ಡ್ ಅನುಕೂಲತೆ, ಬೆಳೆ ಪರಿಹಾರ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಗೆ ಅರ್ಜಿ ಸ್ವೀಕರಿಸ ಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತಾಧಿಕಾರಿಗಳು, ಕಂದಾಯ ಇಲಾಖೆ, ಭೂಮಾಪನಾ ಇಲಾಖೆ, ಆಹಾರ ಸರಬರಾಜು ಇಲಾಖೆ, ಗ್ರಾಮ ಪಂಚಾಯಿತಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಶಿವರÀಳ್ಳಿ ಗ್ರಾಮದಲ್ಲಿ ೨೫ ವರ್ಷಗಳಿಂದ ಜೇನುಕುರುಬರ ಕುಟುಂಬಗಳು ವಾಸಿಸಲು ಮನೆ ಯಿಲ್ಲದೇ ಗುಡಿಸಲು ಹಾಕಿಕೊಂಡು, ಟಾರ್ಪಲ್ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದು, ಮನೆ ನಿರ್ಮಿಸಿಕೊಳ್ಳಲು ಸರ್ಕಾರ ದಿಂದ ಹಕ್ಕುಪತ್ರ ನೀಡುವಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಬೆಂಬಳೂರು ಗ್ರಾಮದ ಸರ್ವೆ ನಂ. ೩೦೭/೨ರಲ್ಲಿ ಕಳೆದ ೫೦ ವರ್ಷಗಳಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಗೆ ೭ ಎಕರೆ ಜಾಗವಿದ್ದು, ಪೈಸಾರಿಯಾಗಿ ರುವುದರಿಂದ ಆ ಜಾಗವನ್ನು ಶಾಲೆ ಹೆಸರಿಗೆ ಕಂದಾಯ ಇಲಾಖೆ ಪರಿವರ್ತಿಸಿಕೊಡುವಂತೆ ಮುಖ್ಯ ಶಿಕ್ಷಕ ಡಿ.ಎಲ್. ಮೂರ್ತಿ ಅರ್ಜಿ ಸಲ್ಲಿಸಿದರು. ಶಿರಹ, ಬೆಂಬಳೂರು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನ ಜಾಗಕ್ಕಾಗಿ ಗ್ರಾಮಸ್ಥರು ಅರ್ಜಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ೭೦ ಅರ್ಜಿ ಹಾಗೂ ಮನವಿಗಳನ್ನು ಅಧಿಕಾರಿಗಳು ಸ್ವೀಕರಿಸಿದರು.
ತಾಲೂಕು ಅಧಿಕಾರಿ ರವೀಂದ್ರ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ, ಉಪಾಧ್ಯಕ್ಷೆ ಪಾವನಾ, ಸದಸ್ಯರು, ಪಿಡಿಓ, ಕಂದಾಯ ಇಲಾಖೆ ಅಧಿಕಾರಿ ಮನುಕುಮಾರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.ಗೋಣಿಕೊಪ್ಪಲು: ಬಗೆಹರಿಯದ ನಿರಂತರ ವಿದ್ಯುತ್ ಸಮಸ್ಯೆ, ರೈತರಿಗೆ ಇನ್ನೂ ಕೈ ಸೇರದ ಬೆಳೆ ಪರಿಹಾರ, ಪೌತಿ ಖಾತೆಯಲ್ಲಿ ನ್ಯೂನತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಬಿರುನಾಣಿ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರಗತಿಯ ಕ್ರಮವನ್ನು ಕಂದಾಯ ಇಲಾಖೆ ನಿರ್ವಹಿಸಲಿದೆ. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ. ವೃದ್ದಾಪ್ಯವೇತನ, ಕಾಡುಪ್ರಾಣಿಗಳ ಉಪಟಳ, ರೈತರ ಸಮಸ್ಯೆ, ಪಡಿತರ ಚೀಟಿ ವಿತರಣೆ, ಆಧಾರ್ ಕಾರ್ಡ್ ಇನ್ನಿತರ ಗುರುತಿನ ಚೀಟಿ ಮತ್ತು ವಿಧವಾ ವೇತನ, ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳು ಕಂಡುಬAದಲ್ಲಿ ನೇರವಾಗಿ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದರು.
ಗ್ರಾಮಸ್ಥ ಬಿ.ಎಂ.ರಾಜು ಮಾತನಾಡಿ ಕೂರ್ಗ್ ಬೈ ರೇಸ್ ಅಡಿಯಲ್ಲಿ ಬಂದೂಕು ಪರವಾನಗಿ ವಿಚಾರದಲ್ಲಿ ಸಂಬAಧ ಪಡದ ವ್ಯಕ್ತಿಗಳು ಇದರ ಲಾಭ ಪಡೆಯುವ ವಿಚಾರಗಳು ಅಲ್ಲಲ್ಲಿ ಕೇಳಿ ಬಂದಿವೆ. ಇದರ ದುರುಪಯೋಗ ತಡೆಯುವಂತೆ ಮನವಿ ಮಾಡಿದರು.
ಮದ್ಯ ಪ್ರವೇಶಿಸಿ ಮಾತನಾಡಿದ ತಹಶೀಲ್ದಾರ್ ಪ್ರಶಾಂತ್ ಈ ಬಗ್ಗೆ ಇಲಾಖೆಯು ಹಲವು ಸುತ್ತುಗಳಲ್ಲಿ ಕಡತವನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನಂತರ ಕಡತಗಳು ಹಿರಿಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಒಂದು ವೇಳೆ ದುರುಪಯೋಗವಾಗುತ್ತಿದ್ದರೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತೇವೆ, ಯಾವುದೇ ಕಾರಣಕ್ಕೂ ದುರುಪಯೋಗ ಮಾಡಲು ಅವಕಾಶ ನೀಡುವುದಿಲ್ಲವೆಂದರು.
ಆನೆ ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಲು ಕಾರ್ಯಕ್ರಮ ರೂಪಿಸುವಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ನಿರಂತರವಾಗಿ ಗ್ರಾಮದಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆ, ಬೆಳೆ ಪರಿಹಾರ ವಿತರಣೆ, ನೀರಾವರಿ ಉದ್ದೇಶ ವಿಚಾರದಲ್ಲಿ ಪಂಚಾಯಿತಿ ಮಟ್ಟದಲ್ಲಿ ಪರಿಹಾರ ನೀಡುವಂತೆ, ಬಂದೂಕು ಪರವಾನಗಿಯಲ್ಲಿ ಪ್ರಮಾಣ ಪತ್ರ ವಿತರಣೆ ಮತ್ತು ಈ ವಿಚಾರದಲ್ಲಿ ಇತರ ಜಾತಿಯವರು ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ, ವನ್ಯಮೃಗಗಳ ಸಂಘರ್ಷಕ್ಕೆ ಪರಿಹಾರ, ಬಿರುನಾಣಿ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಾತಿ, ಮಳೆಹಾನಿ ಪರಿಹಾರ ಮತ್ತು ಮಳೆಯಿಂದ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಮತ್ತು ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಶೀಲ್ದಾರ್ರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಭಾಗದಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಅನಾಹುತ ತಡೆಯಲು ವಿಶೇಷ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಸಭೆಯಲ್ಲಿ ಗ್ರಾಮದ ಪ್ರಮುಖರಾದ ಮನೋಜ್ ಕುಮಾರ್, ಬಿ.ಎಂ. ತಮ್ಮಯ್ಯ, ರೈತ ಮುಖಂಡ ಪೊನ್ನಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಬಿರುನಾಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಎA.ತAಗಮ್ಮ, ಉಪಾಧ್ಯಕ್ಷರಾದ ರಾಜೇಶ್ ಸೇರಿದಂತೆ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಶಿರೆಸ್ತೆದಾರ್ ರಾಧಾಕೃಷ್ಣ, ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಎನ್.ಎನ್. ದಿನೇಶ್ / ಹೆಚ್.ಕೆ.ಜಗದೀಶ್ ಸುಂಟಿಕೊಪ್ಪ: ಸರಕಾರದ ಗ್ರಾಮ ಒನ್ ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಿಂದ ಎಲ್ಲಾ ಇಲಾಖೆಗಳ ಮೂಲಕ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
೭ನೇ ಹೊಸಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಶಾಲಾವರಣದಲ್ಲಿ ಮೊದಲಿಗೆ ಸಸಿಗಳನ್ನು ನೆಟ್ಟರು, ನಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಒನ್ ಕಾರ್ಯಕ್ರಮ ಎಲ್ಲಾ ಪಂಚಾಯಿತಿ ಯಲ್ಲಿ ತೆರೆಯಲಾಗುತ್ತಿದ್ದು, ಸೇವಾ ಸಿಂಧು ಕೇಂದ್ರದಲ್ಲಿ ಸಿಗುವ ಸರಕಾರದ ವಿವಿಧ ಇಲಾಖೆಯ ಸೌಲಭ್ಯಗಳಾದ ಪಡಿತರ ಚೀಟಿ ವೃದ್ಧಾಪ್ಯವೇತನ, ಆದಾಯಜಾತಿ ದೃಢೀಕರಣ ಪತ್ರ, ಕೃಷಿ, ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳನ್ನು ಜನರ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ. ಇದರ ಸದುಪಯೋಗಪಡಿಸಿ ಕೊಳ್ಳುವÀಂತೆ ಕರೆನೀಡಿದರು.
ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳೇ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ದಾಖಲಾತಿ ಪರಿಹಾರ ಕಲ್ಪಿಸಲಾಗುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಇದಾಗಿದ್ದು ಎಲ್ಲಾ ಇಲಾಖೆಗಳ ಸೌಲಭ್ಯಗಳ ಪಿಂಚಣ, ಪಡಿತರ ಚೀಟಿ, ಕೃಷಿ ಸಮ್ಮಾನ್ ಕಾರ್ಯಕ್ರಮ ಜನರಿಗೆ ದೊರಕಿಸಿ ಕೊಡಲಾಗುತ್ತದೆ. ಕೆಲ ಕ್ಲಿಷ್ಟಕರ ಕೆಲಸಗಳನ್ನು ಮಾತ್ರ ಕಂದಾಯ ಕಚೇರಿಯಲ್ಲಿ ಪರಿಶೀಲಿಸಿ ಒದಗಿಸಲಾಗುವುದೆಂದು ಹೇಳಿದರು.
ಶಾಸಕರು ಸರಕಾರ ಜಮೀನುಗಳಲ್ಲಿ ಆಕ್ರಮ ಸಕ್ರಮ ಅಡಿಯಲ್ಲಿ ಸೂರು ನಿರ್ಮಿಸಿಕೊಂಡು ನೆಲೆಸಿರುವ ೨೦ ಮಂದಿಗೆ ಹಕ್ಕುಪತ್ರ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಆಯ್ಕೆಗೊಂಡ ೧೫ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ನೀಡಲಾಯಿತು.
ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಪ್ರಭಾರ ಇಒ ಜಯಣ್ಣ, ಸುಂಟಿಕೊಪ್ಪ ನಾಡಕಚೇರಿಯ ಉಪತಹಶೀಲ್ದಾರ್ ಶಿವಪ್ಪ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್ ಗ್ರಾಮಲೆಕ್ಕಿಗರಾದ ನಸೀಮ, ರೂಪಶ್ರೀ, ನಾಗೇಂದ್ರ ಹಾಗೂ ಗ್ರಾಮ ಸಹಾಯಕರು ಇದ್ದರು. ಆಹಾರ ಇಲಾಖೆ, ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ, ಕೃಷಿ ಇಲಾಖೆ, ಚೆಸ್ಕಾಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ಇಲಾಖೆಗಳಲ್ಲಿ ದೊರೆಯುವ ಸಲವತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು ೬೯ಕ್ಕೂ ವಿವಿಧ ಸಮಸ್ಯೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದರು.