ಮಡಿಕೇರಿ, ಫೆ. ೧೯: ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಒಟ್ಟು ರೂ.೩,೩೦೦ ಕೋಟಿ ಸಂಗ್ರಹವಾಗಿದೆ. ೧೧.೫ ಕೋಟಿ ಮಂದಿ ಧನ ಸಹಾಯ ನೀಡಿದ್ದಾರೆ. ಈ ಪೈಕಿ ಕೋಟಿ, ಲಕ್ಷ ನೀಡಿದವ ರೊಂದಿಗೆ ಹತ್ತು ರೂ. ಹಾಗೂ ಅದಕ್ಕಿಂತ ಕಡಿಮೆ ಹಣ ನೀಡಿದ ಸಾವಿರಾರು ಮಂದಿ ಇದ್ದಾರೆಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟಿçÃಯ ಸಹಕಾರ್ಯದರ್ಶಿ ಹಾಗೂ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಕಟ್ಟಡ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಗೋಪಾಲ್ ನಾಗರಕಟ್ಟೆ ಅವರು ಮಾಹಿತಿಯಿತ್ತರು.

ಇಂದು ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ನೂತನ ಶಸ್ತç ಚಿಕಿತ್ಸಾ ಘಟಕ, ಡಯಾಲಿಸಿಸ್ ಘಟಕ, ಆಮ್ಲಜನಕ ಕಾನ್ಸನ್‌ಟ್ರೇಟರ್ ಘಟಕಗಳೂ ಸೇರಿದಂತೆ ಆಧುನಿಕ ಸೌಲಭ್ಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಉದ್ಘಾಟನೆಯೊಂದಿಗೆ ವಿಶ್ವ ಹಿಂದೂ ಪರಿಷತ್‌ನ ಆಡಳಿತದಡಿಯಲ್ಲಿ ಅಶ್ವಿನಿ ಆಸ್ಪತ್ರೆಯು ೫೦ ವರ್ಷ ಪೂರೈಸಿದ ವಾರ್ಷಿಕೋತ್ಸವವನ್ನು ಕೂಡ ನಡೆಸಲಾಯಿತು.

ಅಯೋಧ್ಯಾ ರಾಮ ಮಂದಿರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿತ್ತ ಗೋಪಾಲ್ ಅವರು, ಈಗಾಗಲೇ ರಾಮ ಮಂದಿರದ ಅಡಿಪಾಯವನ್ನು ನಿರ್ಮಿಸಲಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ರೋಲರ್ ಕಾಂಪೇಕ್ಟೆಡ್ ಕಾಂಕ್ರೀಟ್ ಬಳಸಿ, ೧,೩೧,೦೦೦ ಕ್ಯೂಬಿಕ್ ಮೀಟರ್ ವಿಸ್ತಾರದಲ್ಲಿ ೪೮ ಲೇಯರ್‌ಗಳಲ್ಲಿ ತಳಪಾಯದ ಕೆಲಸಗಳನ್ನು ಪೂರೈಸಲಾಗಿದೆ. ಇನ್ನುಳಿದ ಮೇಲ್ಭಾಗದ ಕೆಲಸಗಳಿಗೆ ಸಿಮೆಂಟನ್ನು ಬಳಸದೆ ಕಲ್ಲುಗಳನ್ನು ಜೋಡಿಸಿ ಅತ್ಯಾಧುನಿಕ ವಿಧಾನದಿಂದ ನಿರ್ಮಾಣಗೊಳಿಸಲಾಗುತ್ತದೆ. ಅಡಿಪಾಯದಿಂದ ಸುಮಾರು ೨೦ ಅಡಿ ಎತ್ತರಕ್ಕೆ ೧೭,೦೦೦ ಪ್ಲಿಂತ್ ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಾಣ ಮಾಡಲಾಗುತ್ತದೆ. ಈ ಕಲ್ಲುಗಳನ್ನು ಬೆಂಗಳೂರಿನ ಸಾದಳ್ಳಿಯಿಂದ ತರಿಸಲಾಗುತ್ತದೆ. ಈ ಕಾರ್ಯವು ಮುಂದಿನ ಮೇ ತಿಂಗಳಿಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಕಾರ್ಯ ಮುಗಿದ ಬಳಿಕ ಗುಲಾಬಿ ಬಣ್ಣದ ಕಲ್ಲುಗಳನ್ನು ರಾಜಾಸ್ಥಾನದ ಭರತ್‌ಪುರದಿಂದ ತರಿಸಲಾಗುತ್ತದೆ. ಈ ಗ್ರಾನೈಟ್‌ಗಳನ್ನು ಬಳಸಿ ಕಾಲಂಗಳನ್ನು ಮತ್ತು ಪಿಲ್ಲರ್‌ಗಳನ್ನು ನೂತನ ತಾಂತ್ರಿಕ ವಿಧಾನದಲ್ಲಿ ಒಂದರೊಳಗೆ ಮತ್ತೊಂದರAತೆ ಜೋಡಿಸಲಾಗುತ್ತದೆ. ವಿಶೇಷವೆಂದರೆ, ಎಲ್ಲಿಯೂ ಕೂಡ ಸಿಮೆಂಟ್ ಬಳಸುವುದಿಲ್ಲ. ಅಯೋಧ್ಯಾ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಇನ್ನೂ ಹಲವು ವರ್ಷ ಬೇಕಾಗಿದೆ. ಆದರೆ, ಅದಕ್ಕೂ ಮುನ್ನ ೨೦೨೩ರ ಡಿಸೆಂಬರ್ ಅಂತ್ಯದ ವೇಳೆಗೆ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಗೋಪಾಲ್ ವಿವರಿಸಿದರು.

ವಿಶ್ವ ಹಿಂದೂ ಪರಿಷತ್‌ನಿಂದ ಅನೇಕ ಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಧರ್ಮ ರಕ್ಷಣೆಗೆ ಭಜರಂಗ ದಳ ಕಾರ್ಯನಿರತ ವಾಗಿದ್ದರೆ, ವಿಶ್ವ ಹಿಂದೂ ಪರಿಷತ್‌ನಿಂದ ಹಿಂದೂ ಭಾವವನ್ನು ಜಾಗೃತಗೊಳಿಸಲು ವಿಭಿನ್ನ ಜಾತಿ ಸಮುದಾಯದ ನಡುವೆ ಸಾಮರಸ್ಯದ ಕೆಲಸ, ಅನಾಥ ಮಕ್ಕಳ ಸೇವೆ, ಆರೋಗ್ಯ ವಿಕಾಸ, ಶಿಶು ಮಂದಿರ ಹಾಗೂ ಬಾಲ ಸಂಸ್ಕಾರಗಳನ್ನು ನಡೆಸಲಾಗುತ್ತಿದೆ. ದೀನ ದಲಿತರ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಅತಿ ಕಡಿಮೆ ಶುಲ್ಕದಲ್ಲಿ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಅಶ್ವಿನಿ ಆಸ್ಪತ್ರೆಯನ್ನು ಸಂಸ್ಥೆ ಸ್ಥಾಪಿಸಿದೆ. ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಅಶ್ವಿನಿ ಆಸ್ಪತ್ರೆಯಿಂದ ಆರೋಗ್ಯ ಸೋದರಿಯರನ್ನು ನೇಮಿಸ ಲಾಗುತ್ತದೆ. ಈ ಸೋದರಿಯರು ಮನೆ ಮನೆಗಳಿಗೆ ತೆರಳಿ ಆರೋಗ್ಯದ ಪ್ರಾರಂಭಿಕ ಪರೀಕ್ಷೆಗಳನ್ನು ನಡೆಸುವ ಮೂಲಕ ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಗೋಪಾಲ್ ಮಾಹಿತಿಯಿತ್ತರು.

ಭಾರತ- ಥಾಯ್ಲೆಂಡ್ ಬಾಂಧವ್ಯ

ಥಾಯ್ಲೆAಡ್‌ನ ಸರಾಫ್ ಕಂಪೆನಿಗಳ ಸ್ಥಾಪಕ ಹಾಗೂ ಆ ದೇಶದಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿರುವ ಸುಶೀಲ್ ಸರಾಫ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಭಾರತ - ಥಾಯ್ಲೆಂಡ್‌ನ ಬಾಂಧವ್ಯ ಅಮೋಘವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಥಾಯ್ಲೆಂಡ್‌ನಲ್ಲಿಯೂ ಕೂಡ ಭಾರತದಂತೆಯೇ ಭಜರಂಗದಳ ದುರ್ಗಾವಾಹಿನಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿಯೂ ಇಂತಹ ಸೇವೆ ದ್ವಿಗುಣಗೊಳ್ಳಲಿ ಎಂದು ಹಾರೈಸಿದರು. ಇನ್ನೊಬ್ಬರಲ್ಲಿರುವ ಕೊರತೆಯನ್ನು ತುಂಬುವAತಹ ಕೆಲಸವನ್ನು ಸೇವಾ ಸಂಸ್ಥೆಗಳು ಮಾಡಬೇಕು ಎಂದು ಕರೆ ನೀಡಿದರು.

(ಮೊದಲ ಪುಟದಿಂದ)

ವಿದೇಶಿ ವೈದ್ಯರೊಂದಿಗೆ ಸಂಪರ್ಕ

ನವದೆಹಲಿಯ ರಾಜ್ಯ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಸದಸ್ಯರು ಸಾರಿನ್ ಉಪಚಾರ್ ಗೃಹದ ನಿರ್ದೇಶಕರೂ ಆಗಿರುವ ಡಾ. ರಜಿನಿ ಸರಿನ್ ಅವರು ಅತಿಥಿಯಾಗಿ ಮಾತನಾಡಿದರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಒದಗಿಸಲು ವಿದೇಶಿ ನುರಿತ ವೈದ್ಯರ ಸಹಕಾರವೂ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಈಗಾಗಲೇ ತಾನು ಬೇರೆ ಬೇರೆ ದೇಶಗಳಲ್ಲಿರುವ ಅತ್ಯಾಧುನಿಕ ನುರಿತ ವೈದ್ಯರುಗಳನ್ನು ಸಂಪರ್ಕಿಸಿದ್ದು, ವೀಡಿಯೋ ಮಾಧ್ಯಮ ಮೂಲಕ ಅವರನ್ನು ನೇರವಾಗಿ ಸಂಪರ್ಕಿಸಿ ತಕ್ಷಣವೇ ಸೂಕ್ತ ಮಾರ್ಗದರ್ಶನ ಪಡೆಯಲು ಅಶ್ವಿನಿ ಆಸ್ಪತ್ರೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿಯಿತ್ತರು. ಆದರೆ, ಭಾರತದಲ್ಲಿ ಇತ್ತೀಚೆಗೆ ಕಂಡಕAಡಲ್ಲಿ ವೈದ್ಯರುಗಳ ಮೇಲೆ ಅನವಶ್ಯಕವಾಗಿ ಹಲ್ಲೆ ನಡೆಸುತ್ತಿರುವಂತಹ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದರು. ಇದರಿಂದಾಗಿ ವೈದ್ಯರುಗಳು ಸೂಕ್ತ ಚಿಕಿತ್ಸೆ ನೀಡಲು ಬೆದರುವಂತಾಗಿದೆ. ವೈದ್ಯರುಗಳು ಮತ್ತು ಆರೋಗ್ಯ ಸಿಬ್ಬಂದಿಗಳ ಸೇವೆಯನ್ನು ನಿರ್ಲಕ್ಷö್ಯ ಮಾಡದೆ ಎಲ್ಲರೂ ಸಹಕರಿಸುವಂತಾಗಬೇಕೆAದು ಕರೆಯಿತ್ತರು.

ದೈವಾರ್ಪಣೆಯ ಅಂತಃಕರಣ

ವಿಶ್ವ ಹಿಂದೂ ಪರಿಷತ್‌ನ ಕೇಂದ್ರ ಸಮಿತಿಯ ಸೇವಾ ಸದಸ್ಯರು ಗೋವಾದಲ್ಲಿ ಮಾತೃಛಾಯೆಯನ್ನು ಸ್ಥಾಪಿಸಲು ಕಾರಣರಾದ ಮಧುಕರ್ ದೀಕ್ಷಿತ್À ಅವರು ಕೂಡ ಸಭೆಯಲ್ಲಿ ಅತಿಥಿಗಳಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಧರ್ಮೋ ರಕ್ಷತಿ ರಕ್ಷಿತಃ' ‘ಸೇವಾ ಪರಮೋಧರ್ಮಃ’ ಎನ್ನುವ ಸೂಕ್ತಿಯಡಿ ವಿಶ್ವ ಹಿಂದೂ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಅಶ್ವಿನಿ ಆಸ್ಪತ್ರೆಯನ್ನು ೧೯೭೨ರಲ್ಲಿ ಸ್ಥಾಪಿಸಲಾಯಿತು. ‘ವಸುಧೈವ ಕುಟುಂಬಕA’ ಎನ್ನುವ ಸರ್ವ ಜನರ ಹಿತದ ಧ್ಯೇಯದೊಂದಿಗೆ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ ಅವರು, ನೈಜ ಸೇವೆಯ ಪ್ರಕ್ರಿಯೆ ಹೇಗಿರಬೇಕು ಎನ್ನುವ ಕುರಿತು ಈ ಕೆಳಗಿನಂತೆ ಉದಾಹರಿಸಿದರು:

‘ಅತಿಥಿ ದೇವೋಭವ’ ಎಂದು ಬಾಯಿ ಮಾತಿನಲ್ಲಿ ಹೇಳುತ್ತೇವೆ. ಪ್ರಭಾವಿ ವ್ಯಕ್ತಿಯೊಬ್ಬ ಮನೆಗೆ ಬಂದಾಗ ಭಾರೀ ಅದ್ಧೂರಿಯಿಂದ ಅವರನ್ನು ಸ್ವಾಗತಿಸುತ್ತೇವೆ. ಆದರೆ, ಇದು ಅತಿಥಿ ಸತ್ಕಾರ ಎನ್ನಲಾಗುವುದಿಲ್ಲ. ಹಸಿದ ವ್ಯಕ್ತಿಯೊಬ್ಬ ಮನೆ ಮುಂದೆ ಬಂದು ‘ಭವತಿ ಭಿಕ್ಷಾಂ ದೇಹಿ’ ಎಂದು ಬೇಡುವಾಗ ಅಂತಹವರಿಗೆ ಊಟೋಪಚಾರ ಮಾಡುವುದು ನಿಜವಾದ ಅತಿಥಿ ಸತ್ಕಾರ. ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭ ಈ ಠಾಣೆಯ ಕಾರ್ಯಚಟುವಟಿಕೆ ಬೆಳೆಯಲಿ ಎಂದು ಹಾರೈಸುತ್ತಾರೆ. ಅಂದರೆ; ಕ್ರೆöÊಂಗಳು, ಅಪರಾಧಗಳು ಹೆಚ್ಚಲಿ ಎಂದು ಹೇಳಿದಂತಾಗುತ್ತದೆ. ಈ ಅಪರಾಧಗಳೆಲ್ಲಾ ಕಡಿಮೆಯಾಗಿ ಪೊಲೀಸ್ ಠಾಣೆಯ ಅವಶ್ಯಕತೆ ಇಲ್ಲದಿರಲಿ ಎನ್ನುವ ಹಾರೈಕೆಯೇ ಸೂಕ್ತವೆನಿಸುತ್ತದೆ. ಆಸ್ಪತ್ರೆ ಉದ್ಘಾಟನೆ ಮಾಡುವಾಗ ಇನ್ನೂ ಅಭಿವೃದ್ಧಿಗೊಳ್ಳಲಿ ಎಂದು ಹಾರೈಸುತ್ತೇವೆ; ಆದರೆ, ಅದರ ಬದಲು ರೋಗಿಗಳು ಬೇಗನೆ ಗುಣಮುಖರಾಗಿ ನಿರೋಗಿಗಳಾಗಲಿ. ಮತ್ತೆ ಅವರು ಆಸ್ಪತ್ರೆಗೆ ಬರದಂತಾಗಲಿ ಎಂದು ಹಾರೈಸುವುದು ನೈಜತೆಯಾಗಿದೆ’ ಕಾರ್ಯಕರ್ತರು ತಮ್ಮ ಕಾರ್ಯಗಳನ್ನು ದೈವಾರ್ಪಣೆಯ ಅಂತಃಕರಣದಿAದ ಮಾಡುವಂತಾಗಲಿ ಎಂದು ಹಾರೈಸಿದರು.

ಮಹಿಳೆಯರು ಚಿಂತೆಯ ಹವ್ಯಾಸಿಗಳಾಗುತ್ತಿದ್ದಾರೆ

ವಿಶ್ವ ಹಿಂದೂ ಪರಿಷತ್‌ನ ರಾಷ್ಟಿçÃಯ ಉಪಾಧ್ಯಕ್ಷೆ ಡಾ. ವಿಜಯಲಕ್ಷಿö್ಮ ದೇಶ್‌ಮನೆ ಅವರು ಮಾತನಾಡಿ, ಇತ್ತೀಚೆಗಿನ ವರ್ಷಗಳಲ್ಲಿ ಮಹಿಳೆಯರು ಚಿಂತೆಯನ್ನೇ ಹವ್ಯಾಸವಾಗಿಸಿಕೊಳ್ಳುತ್ತಿದ್ದಾರೆ. ಈ ಚಿಂತೆಯನ್ನು ಬಿಟ್ಟು ಸಕ್ರಿಯರಾಗಬೇಕಿದೆ. ಚಿಂತೆಯೇ ಅನಾರೋಗ್ಯಕ್ಕೆ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟರು. ಎಲ್ಲಾ ಚಿಕಿತ್ಸೆಗೂ ಮಿಗಿಲಾಗಿ ಯಾವುದೇ ಖರ್ಚಿಲ್ಲದೆ ಯೋಗಾಸನಗಳನ್ನು ಅಭ್ಯಸಿಸಿ ನಿತ್ಯವೂ ಕೆಲಕಾಲ ತೊಡಗಿಸಿಕೊಂಡರೆ ಅನಾರೋಗ್ಯ ದೂರವಾಗುತ್ತದೆ. ಸ್ವಾಮಿ ವಿವೇಕಾನಂದರು ಜೀವನ ಕ್ರಮ ಬದಲಾವಣೆಗೆ ನಮಗೆ ಬರುವ ಚಿಂತೆಯ ತದ್ವಿರುದ್ಧ ಚಿಂತೆ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ನುಡಿದಿರುವುದನ್ನು ಪಾಲನೆ ಮಾಡಿದರೆ ಅನೇಕ ಸಮಸ್ಯೆಗಳು ನೀಗುತ್ತವೆ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಅನಾರೋಗ್ಯವುಂಟಾದಾಗ ವೈದ್ಯರ ಸಲಹೆ ಪಡೆದರೆ ರೋಗ ಉಲ್ಬಣವಾಗುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು. ಅಶ್ವಿನಿ ಆಸ್ಪತ್ರೆಯಲ್ಲಿ ರಕ್ತ ನಿಧಿ ಮತ್ತು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಸಲಹೆಯಿತ್ತರು. ಆಸ್ಪತ್ರೆಯಲ್ಲಿ ವಿದೇಶಗಳÀಲ್ಲಿರುವ ರೋಬೋಟ್ ಚಿಕಿತ್ಸಾ ವ್ಯವಸ್ಥೆಯನ್ನೂ ಕೂಡ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿಯಿತ್ತರು. ಪ್ರಾಣಿ ಹತ್ಯೆ ಮಾಡಿ ಮಾಂಸಾಹಾರ ಸೇವಿಸುವುದಕ್ಕಿಂತ ಆರೋಗ್ಯಕರ ಸಸ್ಯಾಹಾರ ಸೇವಿಸಿ ಎಂದು ಸಲಹೆಯಿತ್ತರು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ರಾಷ್ಟಿçÃಯ ಜಂಟಿ ಕಾರ್ಯದರ್ಶಿ ಸ್ಥಾನು ಮಾಲಯನ್ ಮಾತನಾಡಿದರು. ಅನ್ನದಾನ, ವಿದ್ಯಾದಾನದಂತೆ ಔಷಧ ದಾನವನ್ನು ಸೇವಾಕರ್ತರು ಮಾಡುವಂತಾಗಲಿ ಎಂದು ಸಲಹೆಯಿತ್ತರು.

ಸಭೆಯ ಪ್ರಾರಂಭದಲ್ಲಿ ಶಂಖಾನಾದ, ದೀಪ ಬೆಳಗುವಿಕೆ, ನಾಗರಹೊಳೆ ವನವಾಸಿ ತಂಡದಿAದ ಹಾಡಿಯ ಹಾಡುಗಳು ಆಕರ್ಷಕವಾಗಿ ಮೂಡಿ ಬಂದವು. ವಿಶ್ವ ಹಿಂದೂ ಪರಿಷತ್‌ನ ರಾಷ್ಟಿçÃಯ ಪದಾಧಿಕಾರಿ ಛಾಯಾ ನಂಜಪ್ಪ ಅವರು ಸ್ವಾಗತಿಸಿದರು. ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಕುಪ್ಪಂಡ ರಾಜಾ ನಂಜಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಕೊಡಗು ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಹಾಗೂ ಅಶ್ವಿನಿ ಆಸ್ಪತ್ರೆಯ ಈ ಹಿಂದಿನ ಟ್ರಸ್ಟಿ ಕೆ.ಎಸ್. ದೇವಯ್ಯ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಲ್ಪನಾ ಸಾಮ್ರಾಟ್ ಮತ್ತು ಪ್ರತಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಅಶ್ವಿನಿ ಆಸ್ಪತ್ರೆ ಟ್ರಸ್ಟ್ ಅಧ್ಯಕ್ಷ ಬಿ.ಕೆ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಎಂ.ಸಿ. ಗೋಖಲೆ, ಎ.ಎ. ಚಂಗಪ್ಪ, ಕೃಷ್ಣಮೂರ್ತಿ, ಮಾಜಿ ಟ್ರಸ್ಟಿ ಮಂಡೀರ ದೇವಿ ಪೂಣಚ್ಚ, ಮಚ್ಚಾರಂಡ ಮಣಿ ಕಾರ್ಯಪ್ಪ ಮೊದಲಾದವರು ಹಾಜರಿದ್ದರು.