ಮಡಿಕೇರಿ, ಫೆ. ೧೮: ಹೈಕೋರ್ಟಿನ ಮಧ್ಯಂತರ ಆದೇಶದ ದುರ್ಬಳಕೆ ಮತ್ತು ಬಲವಂತದ ಅನುಷ್ಠಾನ ನಡೆಯುತ್ತಿದೆ ಎಂದು ಆರೋಪಿಸಿ ಕೊಡಗು ಮುಸ್ಲಿಂ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಿಟ್ ಅರ್ಜಿಗೆ ಸಂಬAಧಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ತಪ್ಪಾಗಿ ಅರ್ಥೈಸಿಕೊಂಡಿವೆ. ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ. ಈ ಎಲ್ಲಾ ಅರ್ಜಿಗಳ ಬಾಕಿ ಉಳಿದಿರುವ ವಿಚಾರಣೆಯನ್ನು ಪರಿಗಣಿಸಿಕೊಂಡು, ವಿದ್ಯಾರ್ಥಿಗಳು ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವ ವರಾಗಿದ್ದರೂ, ಕೇಸರಿ ಶಾಲು (ಭಗವಾ), ಸ್ಕಾರ್ಫ್ಗಳು, ಹಿಜಾಬ್ ಅಥವಾ ಧಾರ್ಮಿಕ ಧ್ವಜಗಳು ತರಗತಿಯೊಳಗೆ ಧರಿಸುವುದನ್ನು ಮುಂದಿನ ಆದೇಶದವರೆಗೆ ನಾವು ನಿರ್ಬಂಧಿಸುತ್ತೇವೆ. ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳ ವಸ್ತç ಸಂಹಿತೆ ಸಮವಸ್ತçವನ್ನು ನಿರ್ಧರಿಸಿರುವ ಮಡಿಕೇರಿ, ಫೆ. ೧೮: ಹೈಕೋರ್ಟಿನ ಮಧ್ಯಂತರ ಆದೇಶದ ದುರ್ಬಳಕೆ ಮತ್ತು ಬಲವಂತದ ಅನುಷ್ಠಾನ ನಡೆಯುತ್ತಿದೆ ಎಂದು ಆರೋಪಿಸಿ ಕೊಡಗು ಮುಸ್ಲಿಂ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಿಟ್ ಅರ್ಜಿಗೆ ಸಂಬAಧಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ತಪ್ಪಾಗಿ ಅರ್ಥೈಸಿಕೊಂಡಿವೆ. ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ. ಈ ಎಲ್ಲಾ ಅರ್ಜಿಗಳ ಬಾಕಿ ಉಳಿದಿರುವ ವಿಚಾರಣೆಯನ್ನು ಪರಿಗಣಿಸಿಕೊಂಡು, ವಿದ್ಯಾರ್ಥಿಗಳು ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವ ವರಾಗಿದ್ದರೂ, ಕೇಸರಿ ಶಾಲು (ಭಗವಾ), ಸ್ಕಾರ್ಫ್ಗಳು, ಹಿಜಾಬ್ ಅಥವಾ ಧಾರ್ಮಿಕ ಧ್ವಜಗಳು ತರಗತಿಯೊಳಗೆ ಧರಿಸುವುದನ್ನು ಮುಂದಿನ ಆದೇಶದವರೆಗೆ ನಾವು ನಿರ್ಬಂಧಿಸುತ್ತೇವೆ. ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳ ವಸ್ತç ಸಂಹಿತೆ ಸಮವಸ್ತçವನ್ನು ನಿರ್ಧರಿಸಿರುವ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಸಮವಸ್ತçವನ್ನು ಗೊತ್ತುಪಡಿಸಿರುವ ಸಂಸ್ಥೆಗಳಿಗೆ ಮಾತ್ರ ಈ ಆದೇಶವು ನಿರ್ದೇಶನ ನೀಡುತ್ತದೆ.

ಈ ಆದೇಶದ ನೆಪದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಎಲ್ಲೆಡೆಯೂ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರು ತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ಶಾಲೆಗಳಿಗೆ ಭೇಟಿ ನೀಡಿ ಸಾಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ತಮ್ಮ ಹಿಜಾಬ್ ಕಳಚುವಂತೆ ನಿರ್ದೇಶನ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಮತ್ತು ಈ ವಿಚಾರ ಕರ್ನಾಟಕ ಹೈಕೋರ್ಟ್ನ ಮುಂದೆ ವಿಚಾರಣೆಯಲ್ಲಿರುವಾಗಲೇ ಇಂತಹ ಕ್ರಮ ನಡೆದಿರುವುದು ಗಮನಾರ್ಹವಾಗಿದೆ.

ಸಂಬAಧಿತ ಅಧಿಕಾರಿಗಳಿಗೆ ತಿಳಿಹೇಳುವಂತೆ ಮತ್ತು ವಿದ್ಯಾರ್ಥಿಗಳು, ಶಿಕ್ಷಕರಿಗೆ ಹಿಜಾಬ್ ಅನ್ನು ಬಲವಂತವಾಗಿ ಕಳಚಲು ಅನಿವಾರ್ಯಪಡಿಸದಂತೆ ಪ್ರೌಢ ಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ನಿಯೋಗದಲ್ಲಿ ಪ್ರಮುಖರಾದ ಅಮೀನ್ ಮೊಹಿಸಿನ್, ಹಮೀದ್ ಮೌಲವಿ, ಉಮ್ಮರ್ ಫೈಝಿ, ಹಾರೂನ್ ಎಂ.ಎA., ಹಂಸ ಕೊಟ್ಟಮುಡಿ, ಇಸಾಕ್ ಖಾನ್, ಖಾಲಿದ್, ಮನ್ಸೂರ್, ಬಶೀರ್, ರಫೀಕ್, ಉಸ್ಮಾನ್, ನಿಯಾಝ್, ಉಸ್ಮಾನ್, ಶಬ್ಬೀರ್, ನಝೀರ್, ಇಬ್ರಾಹಿಂ, ಸಂಶೀರ್, ಅಸ್ಕರ್, ನವಾಸ್, ಸಲೀಂ, ಆಬಿದ್, ಕಲಂದರ್ ಮತ್ತಿತರರು ಇದ್ದರು.