*ಗೋಣಿಕೊಪ್ಪ, ಫೆ. ೧೮: ಇಲ್ಲಿನ ೪ನೇ ವಿಭಾಗದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್ ಅವರು ಪರಿಶೀಲಿಸಿದರು.

ಚರಂಡಿ ಕಾಮಗಾರಿ ಸೂಕ್ತ ವ್ಯವಸ್ಥೆಯಲ್ಲಿ ನಡೆಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಿ ವ್ಯವಸ್ಥೆಯಲ್ಲಿ ಚರಂಡಿ ನಿರ್ಮಾಣಕ್ಕೆ ಸೂಚಿಸಬೇಕೆಂದು ಗ್ರಾಮಸ್ಥ ಮಲ್ಚೀರ ಗಾಂಧಿ ದೇವಯ್ಯ ಅವರ ಒತ್ತಾಯಕ್ಕೆ ಮಣಿದು ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಚರಂಡಿಯ ಎರಡೂ ಬದಿಯಲ್ಲಿಯೂ ತಲಾ ೬ ಇಂಚು ಅಗಲದಲ್ಲಿ ಚರಂಡಿ ನಿರ್ಮಿಸಲು ಕಾಮಗಾರಿಯ ಅನುಮೋದನೆಯಲ್ಲಿ ಸೂಚಿಸ ಲಾಗಿತ್ತು. ಆದರೆ, ೧ ಇಂಚು ಅಗಲೀಕರಣದಲ್ಲಿ ಚರಂಡಿ ನಿರ್ಮಿಸಲು ಮುಂದಾಗಿದ್ದರು. ಇದನ್ನು ಖಂಡಿಸಿದ ಮಲ್ಚೀರ ಗಾಂಧಿ ದೇವಯ್ಯ ಅವರು ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿ ಕಾಮಗಾರಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್ ಹಾಗೂ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಅವರು ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರನಿಗೆ ಚರಂಡಿ ನಿರ್ಮಿಸಲು ಅನುಮೋದನೆ ನೀಡಿದ ನಿಯಮದಂತೆ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳ¨

ೆÃಕು. ಯಾವುದೇ ವ್ಯತ್ಯಾಸ ಕಂಡುಬAದರೆ ತಕ್ಷಣ ಕಾಮಗಾರಿ ಬಿಲ್ಲನ್ನು ತಡೆಹಿಡಿಯ ಲಾಗುವುದು. ಹೀಗಾಗಿ ಸೂಕ್ತ ರೀತಿಯಲ್ಲಿ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಬೇಕೆಂದು ಗುತ್ತಿಗೆದಾರರಿಗೆ ಅಧ್ಯಕ್ಷರು ಸೂಚಿಸಿದರು.

-ಎನ್.ಎನ್. ದಿನೇಶ್