ಕೂಡಿಗೆ, ಫೆ. ೧೮: ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಯ ಆವರಣದಲ್ಲಿ ಕ್ರೀಡಾ ಶಾಲೆಯ ಪದವಿ ವಿದ್ಯಾರ್ಥಿಗಳಿಗೆ ಕ್ರೀಡಾ ವಸತಿ ನಿಲಯ ಆರಂಭಕ್ಕೆ ರಾಜ್ಯಮಟ್ಟದ ಇಲಾಖೆಯ ಅಧಿಕಾರಿಗಳ ತಂಡ ಕೂಡಿಗೆ ಕ್ರೀಡಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ೫ ತಿಂಗಳ ಹಿಂದೆ ಕೂಡಿಗೆಗೆ ಭೇಟಿ ನೀಡಿದ ರಾಜ್ಯ ಕ್ರೀಡಾ ಸಚಿವರಿಗೆ ಸ್ಥಳೀಯ ಪದವಿ ವಿದ್ಯಾರ್ಥಿಗಳು ಮನವಿಯನ್ನು ಸಲ್ಲಿಸಿದ್ದರು. ಅದರಂತೆ ಸಚಿವರು ಸಕಾರಾತ್ಮಕ ಭರವಸೆಯನ್ನು ನೀಡಿದ್ದರು.
ಈ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕಿ ನಾಗರತ್ನ ಮತ್ತು ಇಲಾಖೆಯ ಇಂಜಿನಿಯರ್ ಹರೀಶ್ ತಂಡವು ಭೇಟಿ ನೀಡಿ ಪದವಿ ಕ್ರೀಡಾ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ಜಾಗ ಪರಿಶೀಲನೆ ನಡೆಸಿದರು.
ರಾಜ್ಯ ಕ್ರೀಡಾ ಇಲಾಖೆಯ ಸೂಚನೆಯಂತೆ ಜಿಲ್ಲೆಯ ಕೆ.ಆರ್.ಡಿ.ಎಲ್. ಸಂಸ್ಥೆ ಅಧಿಕಾರಿಗಳ ತಂಡವು ಕ್ರೀಡಾ ವಸತಿ ನಿಲಯ ಆರಂಭದ ಕ್ರಿಯಾ ಯೋಜನೆಗೆ ಸಂಬAಧಿಸಿದ ಪೂರ್ವ ಸಿದ್ಧತೆ ತಯಾರಿಸಲು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಗುರುಸ್ವಾಮಿ, ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವಕುಮಾರ್ ಸೇರಿದಂತೆ ಅಧಿಕಾರಿ ವರ್ಗದವರು, ಕ್ರೀಡಾ ತರಬೇತಿದಾರರುಗಳು ಹಾಜರಿದ್ದರು.
-ಕೆ.ಕೆ. ನಾಗರಾಜಶೆಟ್ಟಿ.