ನಾಪೋಕ್ಲು, ಫೆ. ೧೮: ಸಮೀಪದ ಹೊದ್ದೂರು ಗ್ರಾಮದ ಶ್ರೀಶಾಸ್ತ- ಈಶ್ವರ ದೇವಾಲಯದ ವಾರ್ಷಿಕ ಹಬ್ಬವು ವಿಜೃಂಭಣೆಯಿAದ ಜರುಗಿತು. ತಾ, ೧೬ ರಿಂದ ಪ್ರಾರಂಭವಾದ ಹಬ್ಬವು ವಿವಿಧ ಪೂಜಾ ವಿಧಿ ವಿಧಾನಗಳಿಂದ ಶುಕ್ರವಾರ ಸಂಪನ್ನಗೊAಡಿತು. ಆಚಾರ್ಯ ವರಣ, ಪುಣ್ಯ ಹವನ ಶುದ್ಧಿ, ಪ್ರಸಾದ ಶುದ್ಧಿ , ದೀಪಾರಾಧನೆ, ದುರ್ಗಾ ಪೂಜೆ, ಈಶ್ವರ ದೇವರ ಮಹಾಪೂಜೆ, ಅಭಿಶೇಕ ಪೂಜೆ, ಗಣಹೋಮ, ಮಹಾ ಮೃತ್ಯುಂಜಯ ಪೂಜೆ, ಉಷಾ ನೈವೇಧ್ಯ ಪೂಜೆ, ದೃಢಕಲಶ ಪೂಜೆ, ಅಭಿಶೇಕ, ಹರಕೆ ಇನ್ನಿತರ ಪೂಜೆಗಳು ನೆರವೇರಿದ ಬಳಿಕ ಮಹಾಪೂಜೆ ಜರುಗಿ ತೀರ್ಥ ಪ್ರಸಾದ ಅನ್ನಸಂತರ್ಪಣೆ ನೆರವೇರಿದ ಬಳಿಕ ದೇವರ ನೃತ್ಯಬಲಿ ಜರುಗಿತು.

ಭೂತ ಬಲಿ, ಮತ್ತಿತರ ಪೂಜಾ ವಿಧಿ ವಿಧಾನಗಳು ನಡೆದವು. ತೊಯತ ತೆರೆ ಕೋಲ, ವಿಷ್ಣ್ಣುಮೂರ್ತಿ ದೇವರ ಕೋಲ ನಡೆದು ಭಕ್ತಾದಿಗಳಿಗೆ ಪ್ರಸಾದ, ಅನ್ನಸಂತರ್ಪಣೆಯೊAದಿಗೆ ಹಬ್ಬವು ಸಂಪನ್ನಗೊAಡಿತು. ಅರ್ಚಕ ಪ್ರಸಾದ್ ಭಟ್, ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಹಾಗೂ ಆಡಳಿತ ಮಂಡಳಿ. ಕೂಡಂಡ, ಐರೀರ, ಚೆಟ್ಟಿಮಾಡ, ಮೇಕಂಡ, ಚಿಂಡೊಳೀರ ಕುಟುಂಬಸ್ಥರ ತಕ್ಕ ಮುಖ್ಯಸ್ಥರು, ಊರಿನ ಪರವೂರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

-ದುಗ್ಗಳ