ಮಡಿಕೇರಿ, ಫೆ. ೧೮: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಪ್ರಯುಕ್ತ ಮಡಿಕೇರಿ ತಾಲೂಕಿಗೆ ಸಂಬAಧಿಸಿದAತೆ ತಹಶೀಲ್ದಾರರ ನೇತೃತ್ವದಲ್ಲಿ ತಾ. ೧೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ತಹಶೀಲ್ದಾರರು ಮತ್ತು ಇತರೆ ಇಲಾಖೆಯ ತಾಲೂಕು ಮಟ್ಟದಲ್ಲಿ ಅಧಿಕಾರಿಗಳಿಂದ ಮಡಿಕೇರಿ ಹೋಬಳಿಯ ಕಡಗದಾಳು ಗ್ರಾಮದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ.

ಕಡಗದಾಳು ಮತ್ತು ಇಬ್ನಿವಳವಾಡಿ ವೃತ್ತಕ್ಕೆ ಒಳಪಡುವ ಗ್ರಾಮಗಳ ಪಹಣಿ ದಾಖಲೆಗಳ ತಿದ್ದುಪಡಿ ಮತ್ತಿತರ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯ, ಆಹಾರ ಪಡಿತರ ಚೀಟಿಗೆ ಸಂಬAಧಿಸಿದ ವಿಷಯ, ಪೋಡಿ, ಅಳತೆ ವಿಚಾರಕ್ಕೆ ಸಂಬAಧಿಸಿದAತೆ, ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಆಧಾರ್ ಕಾರ್ಡಿಗೆ ಸಂಬAಧಿಸಿದAತೆ, ನಾಡ ಕಚೇರಿ, ಎಜೆಎಸ್‌ಕೆ. ಕೇಂದ್ರಗಳಲ್ಲಿ ನೀಡುವ ಸೇವೆಗಳ ಕುರಿತು, ಅತಿವೃಷ್ಟಿ ಪರಿಹಾರ ವಿಚಾರಗಳು ಮತ್ತು ಗ್ರಾಮದ ಸಮಸ್ಯೆಗಳು ಇತರೆ ವಿಷಯಗಳ ಬಗ್ಗೆ ಕಡಗದಾಳು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ವಾಸ್ತವ್ಯ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ಸಾದ್ಯವಾದಷ್ಟು ಸ್ಥಳದಲ್ಲಿಯೇ ಅಂತಿಮ ವಿಲೇವಾರಿ/ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಕ್ರಮವಹಿಸಲಿದ್ದಾರೆ ಎಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ತಿಳಿಸಿದ್ದಾರೆ.