ಮಡಿಕೇರಿ, ಫೆ.೧೬: ನಗರದ ಆಕಾಶವಾಣಿ ಕೇಂದ್ರದಲ್ಲಿ ‘ರೇಡಿಯೋ ರೈತ ದಿನಾಚರಣೆ’ ಕಾರ್ಯಕ್ರಮವು ಪ್ರಗತಿಪರ ಕೃಷಿಕರಿಗೆ ಸನ್ಮಾನಿಸುವ ಮೂಲಕ ಮಂಗಳವಾರ ನಡೆಯಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರಗತಿಪರ ರೈತರಾದ ಕಟ್ಟೆಮನೆ ಪ್ರೇಮ, ಸೂದನ ಲೋಕೇಶ್, ಎಚ್.ಪಿ.ಪ್ರದೀಪ, ಬಡುವಂಡ ಬೆಳ್ಯಪ್ಪ ಮುತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ರೈತರು ತಾವು ಬೆಳೆದ ಉತ್ಪನ್ನಗಳನ್ನು ಸ್ವತ: ರೈತರೇ ಇಂದಿನ ಶರವೇಗದ ಬದುಕಿನಲ್ಲಿ ಆಹಾರ ಹಾಗೂ ಜೀವನ ಪದ್ಧತಿಯಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದರಿಂದ ದೇಹದ ಮೇಲೂ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳೀಯವಾಗಿ ದೊರೆಯುವ ಆಹಾರವನ್ನು ಉಪಯೋಗಿಸಬೇಕು ಎಂದು ಕರೆ ನೀಡಿದರು.
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವಿಜಯ ಅಂಗಡಿ ಮಾತನಾಡಿ. ಕೃಷಿ ಜೊತೆಗೆ ಬಾಂಧವ್ಯ ಇಟ್ಟುಕೊಂಡರೆ ಬದುಕು ಸಾರ್ಥಕ ಎಂಬುದನ್ನು ಯಾರೂ ಸಹ ಮರೆಯುವಂತಿಲ್ಲ.
ಆಕಾಶವಾಣಿಯಲ್ಲಿ ಕೃಷಿ ಸಂಬAಧ ಸಾಕಷ್ಟು ಕಾರ್ಯಕ್ರಮಗಳು ಜನಮನ್ನಣೆ ಗಳಿಸಿರುವುದು ವಿಶೇಷವಾಗಿದೆ. ಆಕಾಶವಾಣಿ ಕಾರ್ಯಕ್ರಮಗಳು ಕೃಷಿಕರು ಸೇರಿದಂತೆ ಹಲವರನ್ನು ಜ್ಞಾನವಂತರನ್ನಾಗಿ ಮಾಡಿದೆ. ಮಹಿಳಾವಾಣಿ, ಯುವವಾಣಿ, ಕೃಷಿರಂಗ, ಮಕ್ಕಳ, ಸಾಹಿತ್ಯ, ಸಂಗೀತ, ಶೈಕ್ಷಣಿಕ ಹೀಗೆ ಹಲವು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿರುವುದು ವಿಶೇಷವಾಗಿದೆ. ಕೊಡಗು ಆಕಾಶವಾಣಿ ಕೇಂದ್ರವು ಸಹ ನಾಡಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಕುಗ್ರಾಮಗಳಿಗೂ ಕಾರ್ಯಕ್ರಮಗಳು ತಲುಪಿರುವುದು ವಿಶೇಷವಾಗಿವೆ. ಕೊಡಗು ಆಕಾಶವಾಣಿ ಕೇಂದ್ರವು ಸಹ ನಾಡಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಕುಗ್ರಾಮಗಳಿಗೂ ಕಾರ್ಯಕ್ರಮಗಳು ತಲುಪಿರುವುದು ವಿಶೇಷ ಎಂದು ನುಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರತಿಯೊಬ್ಬ ಕೃಷಿಕರು ‘ಎಫ್ಪಿಒ’ನಲ್ಲಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಕಾಫಿ ಬೆಳೆಗೆ ಸಹಾಯಧನ ದೊರೆಯಲಿದೆ. ಭತ್ತ ಬೆಳೆ ಸಂಬAಧಿಸಿದAತೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಸ್ವಾಗತಿಸಿದರು. ಪ್ರಸಾರ ನಿರ್ವಾಹಕರಾದ ಶಾಂತ ಕುಮಾರ್ ವಂದಿಸಿದರು. ಮಂದ್ರೀರ ನಾಣಯ್ಯ, ತೇಜಸ್ ನಾಣಯ್ಯ, ಇತರರು ಇದ್ದರು. ಗಣೇಶ್ ಕೃಷಿ ಹಾಡು ಹಾಡಿದರು.