(ಕೆ.ಎA ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಫೆ. ೧೬: ಕೊಡಗು ಜಿಲ್ಲೆ ಕ್ರೀಡೆಯ ತವರೂರಾಗಿದೆ. ಜಿಲ್ಲೆಯ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಆದರೆ ಜಿಲ್ಲೆಯಲ್ಲಿ ಫುಟ್ಬಾಲ್‌ಗೆ ಪ್ರೋತ್ಸಾಹ ಹಾಗೂ ಬೆಂಬಲ ಸಿಗದಿರುವುದು ಬೇಸರದ ಸಂಗತಿಯಾಗಿದೆ. ಒಂದೆಡೆ ಈ ವಿಷಯದಲ್ಲಿ ಜಿಲ್ಲೆಯ ಫುಟ್ಬಾಲ್ ಪಟುಗಳಲ್ಲಿ ಬೇಸರ ಕೂಡ ಇದೆ.
ಜಿಲ್ಲೆಯ ಯುವ ಫುಟ್ಬಾಲ್ ಪಟುಗಳಿಗೆ ಸೂಕ್ತ ವೇದಿಕೆ ಒದಗಿಸಿ, ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡಲು ಜಿಲ್ಲೆಯ ವಾಣಿಜ್ಯ ನಗರಿ ಗೋಣಿಕೊಪ್ಪಲಿನಲ್ಲಿ ಕಳೆದ ಹತ್ತು ವರ್ಷಗಳಿಂದ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ "ಚೆಲ್ಸಿ ಸ್ಪೋರ್ಟ್ಸ್ ಕ್ಲಬ್" ಅಂತರರಾಷ್ಟಿçÃಯ ಮಟ್ಟದ ಚಾಂಪಿಯನ್ಸ್ ಲೀಗ್ ಮಾದರಿಯಲ್ಲಿ, ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ "ಕೂರ್ಗ್ ಚಾಂಪಿಯನ್ಸ್ ಲೀಗ್ " ಫುಟ್ಬಾಲ್ ಪಂದ್ಯಾಟವನ್ನು ಮಾರ್ಚ್ ೧೫ ಹಾಗೂ ೧೬ ರಂದು ಗೋಣಿಕೊಪ್ಪಲಿನ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಿದೆ.
ಅಂತರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದ ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
೨೫೦ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ
ಮೊದಲ ಆವೃತ್ತಿಯ ಕೂರ್ಗ್ ಚಾಂಪಿಯನ್ಸ್ ಲೀಗ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಾರ್ಚ್ ೪ ರಂದು ಗೋಣಿಕೊಪ್ಪಲಿನಲ್ಲಿ ನಡೆಯಲಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಎಲ್ಲಾ ಕ್ಲಬ್‌ಗಳ ಆಟಗಾರರಿಗೆ ಬಿಡ್ಡಿಂಗ್ ಫಾರಮ್ ವಿತರಿಸಲಾಗಿದ್ದು, ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ತಾ. ೨೬ ಕೊನೆಯ ದಿನವಾಗಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ೩೦೦ ಕ್ಕೂ ಹೆಚ್ಚು ಫುಟ್ಬಾಲ್ ಪಟುಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಕೂರ್ಗ್ ಚಾಂಪಿಯನ್ಸ್ ಲೀಗ್ ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ.
ಮೊದಲ ಆವೃತ್ತಿಗೆ ೧೨ ತಂಡಗಳು
ಕೂರ್ಗ್ ಚಾಂಪಿಯನ್ಸ್ ಲೀಗ್ ಮೊದಲ ಆವೃತ್ತಿಯಲ್ಲಿ ೧೨ ತಂಡಗಳು ಭಾಗವಹಿಸಲಿವೆ. ತಲಾ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು,ಒAದು ತಂಡ ಐದು ಪಂದ್ಯಗಳನ್ನು ಆಡಬೇಕಾಗುತ್ತದೆ. ಪಂದ್ಯವು ೭ ಜನರ ಆಟವಾಗಿದ್ದು, ಒಂದು ತಂಡಕ್ಕೆ ಗರಿಷ್ಠ ೧೨ ಆಟಗಾರರನ್ನು ಹರಾಜು ಮಾಡುವ ಅವಕಾಶ ನೀಡಲಾಗಿದೆ. ತಾ. ೨೬ ರಂದು ಎಲ್ಲಾ ತಂಡಗಳ ಮಾಲೀಕರ ಸಭೆಯನ್ನು ಕರೆಯಲಾಗಿದೆ.
೨೪ ಐಕಾನ್ ಆಟಗಾರರು
ಕೂರ್ಗ್ ಚಾಂಪಿಯನ್ಸ್ ಲೀಗ್‌ನಲ್ಲಿ ೨೪ ಐಕಾನ್ ಆಟಗಾರರನ್ನು ಗುರುತಿಸಲಾಗಿದ್ದು,ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಜಿಲ್ಲೆಯ ಅತ್ಯುತ್ತಮ ಆಟಗಾರರನ್ನು ಗುರುತಿಸಿ ಐಕಾನ್ ಪಟ್ಟಿಗೆ ಸೇರಿಸಲಾಗುತ್ತದೆ. ಒಂದು ತಂಡಕ್ಕೆ ಎರಡು ಐಕಾನ್ ಆಟಗಾರರನ್ನು ಖರೀದಿಸುವ ಅವಕಾಶ ನೀಡಲಾಗಿದೆ. ಉಳಿದಂತೆ ಗೋಲ್ ಕೀಪರ್, ಡಿಫೆಂಡರ್, ಮಿಡ್ ಫೀಲ್ಡರ್ ಹಾಗೂ ಫಾರ್ವಡ್ ಆಟಗಾರರ ಪಟ್ಟಿಯನ್ನು ಪ್ರತ್ಯೇಕ ವಿಂಗಡಿಸಲಾಗಿದೆ.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಪಂದ್ಯಾಟ
ಕೂರ್ಗ್ ಚಾಂಪಿಯನ್ಸ್ ಲೀಗ್ ಪಂದ್ಯಾಟವು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯಲಿದೆ. ಪಂದ್ಯಾಟವು ಎ.ಐ.ಎಫ್.ಎಫ್. ಹಾಗೂ ಕೆ.ಎಸ್.ಎಫ್.ಎ ನಿಯಮದಂತೆ ನಡೆಯಲಿದೆ. ಪಂದ್ಯಾಟವನ್ನು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನ ರಾಜ್ಯ ಮಟ್ಟದ ತೀರ್ಪುಗಾರರು ನಡೆಸಿಕೊಡಲಿದ್ದಾರೆ.
ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದೆ. ಕೊಡಗಿನ ಫುಟ್ಬಾಲ್ ಉತ್ಸವಕ್ಕೆ ಗೋಣಿಕೊಪ್ಪ ಹಾಗೂ ಜಿಲ್ಲೆಯ ಫುಟ್ಬಾಲ್ ಪಟುಗಳು ಕಾತುರದಿಂದ ಕಾಯುತ್ತಿದ್ದಾರೆ.