ಮಡಿಕೇರಿ, ಫೆ. ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿಯಾಗಿ ನಗರ ಠಾಣೆ ಉಪನಿರೀಕ್ಷಕರಾಗಿದ್ದ ಅಂತಿಮ ಅವರು ನಿಯೋಜಿತರಾಗಿದ್ದಾರೆ. ಇವರ ಸ್ಥಾನಕ್ಕೆ ನಗರ ಠಾಣೆಯ ಅಪರಾಧ ವಿಭಾಗದ ಎಸ್.ಐ. ಆಗಿರುವ ಹಮೀದ್ ಅವರಿಗೆ ಪ್ರಬಾರವಾಗಿ ಜವಾಬ್ದಾರಿ ನೀಡಲಾಗಿದೆ. ಹಮೀದ್ ಅವರು ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದು, ಬಳಿಕ ನಗರ ಠಾಣೆಗೆ ನೂತನ ಅಧಿಕಾರಿಯ ನೇಮಕವಾಗಬೇಕಿದೆ.