ಮಡಿಕೇರಿ, ಫೆ. 17: ಕೊಡಗು ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ಎ. ಲೋಕೇಶ್ ಕುಮಾರ್ ನೇಮಕಗೊಂಡಿದ್ದು, ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜುಮೋಗವೀರ ಅವರ ಸಮ್ಮುಖದಲ್ಲಿ ಲೋಕೇಶ್ ಕುಮಾರ್ ಅಧಿಕಾರ ವಹಿಸಿಕೊಂಡರು.
ಸುಂಟಿಕೊಪ್ಪ ಮೂಲದವರಾಗಿದ್ದು, ಕಳೆದ 7 ವರ್ಷಗಳಿಂದ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಲೋಕೇಶ್ ಕುಮಾರ್ 24 ವರ್ಷಗಳ ಕಾಲ ಮಡಿಕೇರಿ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಮಾಡಿದ್ದು, ಈ ಅವಧಿಯಲ್ಲಿ 6 ವರ್ಷಗಳ ಕಾಲ ಕೊಡಗು ಜಿಲ್ಲಾ ಸರಕಾರಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.