ಕಡಂಗ, ಫೆ. ೧೬: ಕೊಕ್ಕಂಡ ಬಾಣೆ ದರ್ಗಾ ಉರುಸ್‌ನ ಸೌಹಾರ್ದ ಸಮಾರಂಭವು ದರ್ಗಾ ಸಭಾಂಗಣದಲ್ಲಿ ನಡೆಯಿತು. ಸೌಹಾರ್ದ ಸಮ್ಮೇಳನದಲ್ಲಿ ಕಡಂಗ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಉದ್ಘಾಟನೆಯನ್ನು ಸುಬಿರ್ ಸಿ.ಇ. ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ನಾಣಯ್ಯ ಮಾತನಾಡಿ ಇಂತಹ ಸಮಾರಂಭಗಳಿAದ ನಾಡಿನಲ್ಲಿ ಭಾವೈಕ್ಯತೆ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚೆಯ್ಯಂಡಾಣೆ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚ್ಯಯ್ಯ, ಬದ್ರಿಯಾ ಸುನ್ನಿ ಮಸೀದಿಯ ಅಧ್ಯಕ್ಷ ಸುಲೇಮಾನ್ ಸಿ.ಎಂ., ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯರಾದ ಸುಗುಣ, ಪಾಲಚಂಡ ಪರ್ವೇಶ್, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್, ಮೊಹಮ್ಮದ್, ಎಡಪ್ಪಲ ಜಮಾ ಅಧ್ಯಕ್ಷ ಶಾಫಿ, ಹಮೀದ್ ದಾರಿಮಿ, ಶುಯಿಬ್ ಫೈಜಿ ಹಾಜರಿದ್ದರು. ಸಮಾರಂಭದ ವಂದನಾರ್ಪಣೆಯನ್ನು ಶಮೀರ್ ನೆರವೇರಿಸಿದರು.