ಪಾಲಿಬೆಟ್ಟ, ಫೆ. ೧೬: ಸರ್ವಧರ್ಮದ ಭಾವೈಕ್ಯತೆಯ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ಗೆ ಸಂಪನ್ನಗೊAಡಿತು.
ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಶಾಂತಿ ಸಹಬಾಳ್ವೆಯೊಂದಿಗೆ ಜೀವನ ನಡೆಸುವಂತಾಗಲಿ ಎಂದು ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಹಾರೈಸಿದ್ದಾರೆ. ಉರೂಸ್ ಕೊನೆಯ ದಿನದಂದು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತ ರ್ಪಣೆ ಮಾಡಲಾಯಿತು. ನಂಬಿಕೆಗೆ ಹೆಸರುವಾಸಿಯಾಗಿರುವ ಉರೂಸ್ನಲ್ಲಿ ಭಕ್ತಾದಿಗಳು ಹರಕೆ ತೀರಿಸಿದರು. ಕೋವಿಡ್ ನಿಯಮ ಪಾಲನೆ ಯೊಂದಿಗೆ ದರ್ಗಾ ಬಳಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಉಪ ಖಾಝಿ ಸಾದಲಿ ಫೈಝಿ, ಧಾರ್ಮಿಕ ಪಂಡಿತ ಅಬ್ದುಲ್ರಶೀದ್ ಝೈನಿ, ಮುಸ್ಲಿಂ ಜಮಾಅತ್ ಅಧ್ಯಕ್ಷ ಹ್ಯಾರೀಸ್ ಹಾಜಿ,ಉಪಾಧ್ಯಕ್ಷ ಎಂ. ಸೈನುದ್ದೀನ್, ಮಸೀದಿಯ ಖತೀಬ್ ಅಲಿ ಸಖಾಫಿ, ತಾರೀಕಟ್ಟೆ ಜಮಾಅತ್ ಅಧ್ಯಕ್ಷ ಅಲಿ, ಪಾಲಿಬೆಟ್ಟ ಜಮಾಅತ್ ಪ್ರಧಾನ ಕಾರ್ಯದರ್ಶಿ ಹನೀಫ್, ಖಜಾಂಚಿ ಟಿ.ಕೆ. ಮುಸ್ತಫ, ಕಾರ್ಯದರ್ಶಿ ಸಮೀರ್, ಸಹ ಕಾರ್ಯದರ್ಶಿ ಶೌಕತ್' ಸದಸ್ಯರುಗಳಾದ ಬಶೀರ್, ಖಾಲಿದ್ ಹಾಜಿ, ಎಂ.ಯು ಮುನೀರ್, ಎರ್ಮು, ಮುನೀರ್, ಸದರ್ ಮುಹಲ್ಲಿಂ ಹುಸೈನ್ ಸಹದಿ, ಸಿರಾಜುದ್ದೀನ್ ಮಿಸ್ಬಾಯಿ, ಸೈನುದ್ದೀನ್ ಉಸ್ತಾದ್, ರಜಾಕ್ ಉಸ್ತಾದ್, ಸುಫಿಯಾನ್ ಸಹದಿ ಸೇರಿದಂತೆ ಮತ್ತಿತರರು ಹಾಜರಿದ್ದರು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. - ಪುತ್ತಂ ಪ್ರದೀಪ್