ವೀರಾಜಪೇಟೆ, ಫೆ. ೧೬: ವೀರಾಜಪೇಟೆಯ ಸಮೀಪವಿರುವ ಆರ್ಜಿ ಗ್ರಾಮದ ಮೊದಲ ಪೆರುಂಬಾಡಿ ರಸ್ತೆಗೆ ಆರ್ಜಿ ಗ್ರಾಮ ಪಂಚಾಯಿತಿ ಇತ್ತೀಚೆಗೆ ಸೇನಾ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೆಸರನ್ನಿಟ್ಟಿದೆ. ನಾಮಫಲಕವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಹಾಗೂ ಮಾಜಿ ಸೈನಿಕರು ಗಳು ಅನಾವರಣ ಗೊಳಿಸಿದರು.ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರಾಮಚಂದ್ರ, ಮಾಜಿ ತಾ. ಪಂ. ಸದಸ್ಯ ಬಿ.ಎಂ. ಗಣೇಶ್, ಆರ್ಜಿ ಮತ್ತು ಬೇಟೋಳಿಯ ಮಾಜಿ ಸೈನಿಕರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಉಪೇಂದ್ರ, ಅನೂಪ್ ಜೋಸೆಫ್, ಸುನಿತಾ, ಕೆ.ಟಿ. ಬಶೀರ್, ಶಹದೀರ್ ಆಲಿ, ಫಾತಿಮಾ, ಆರ್ಜಿ ಗ್ರಾ.ಪಂ. ಪಿಡಿಓ ರಾಜನ್ ಉಪಸ್ಥಿತರಿದ್ದರು.