ಮಡಿಕೇರಿ, ಫೆ. ೧೬: ತಟ್ಟಳ್ಳಿಯಲ್ಲಿ ಹುಲಿ ಹತ್ಯೆ ಮಾಡಿ ಅದರ ಚರ್ಮ, ಇತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ದಿಡ್ಡಳ್ಳಿ ಹಾಡಿಯ ಮುಖಂಡನ ಹೆಸರು ಮುಂಚೂಣಿಯಲ್ಲಿರುವದು ವಿಚಾರಣೆ ವೇಳೆ ಹೊರಬಿದ್ದಿದೆ.

ತಟ್ಟಳ್ಳಿಯಲ್ಲಿ ಹುಲಿ ಚರ್ಮ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಅರಣ್ಯ ಸಂಚಾರಿದಳದವರು ನಾಲ್ವರು ಕಾರ್ಮಿಕರನ್ನು ಬಂದಿಸಿದ್ದರು. ನಂತರದಲ್ಲಿ ಸಾರ್ವಜನಿಕ ಸಂಘಟನೆಯವರು ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ ಬಳಿಕ ಕಾರ್ಯಾಚರಣೆ ನಡೆಸಿದ ನಾಗರಹೊಳೆ ಆನೆಚೌಕೂರು ವಲಯದ ಅರಣ್ಯಾಧಿಕಾರಿಗಳು ಪ್ರಮುಖ ಆರೋಪಿ ಮನೋಜ್ ಹಾಗೂ ದಿಡ್ಡಳ್ಳಿ ಹಾಡಿ ಮುಖಂಡ ಅಪ್ಪಾಜಿ ಅವರುಗಳನ್ನು ಸೆರೆ ಹಿಡಿದಿದ್ದರು.., ವಿಚಾರಣೆ ವೇಳೆ ಅಪ್ಪಾಜಿ ಈ ಜಾಲದ ರೂವಾರಿಯೆಂಬದು ಬೆಳಕಿಗೆ ಬಂದಿದೆ..!