ಕುಶಾಲನಗರ, ಫೆ. ೧೫: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಕುಶಾಲನಗರ ಮಾಜಿ ಸೈನಿಕರು ಮತ್ತು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಮೊಂಬತ್ತಿ ಹಿಡಿದು ಸೈನಿಕರಿಗೆ ಜಯಘೋಷ ಕೂಗಲಾಯಿತು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜನಾರ್ಧನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಡಿ.P.ೆ ತಿಮ್ಮಪ್ಪ, ಅಮೃತರಾಜ್, ರೂಪ ಉಮಾಶಂಕರ್, ಕೆ.ಜಿ. ಮನು, ಎಂ. ವಿ. ನಾರಾಯಣ, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ನಿವೃತ್ತ ಯೋಧರು, ಜಿ.ಪಂ. ಮಾಜಿ ಸದಸ್ಯ ಮಂಜುಳಾ, ನವನೀತ್ ಪೊನ್ನೇಟಿ ಮತ್ತಿತರರಿದ್ದರು.