ಮಡಿಕೇರಿ, ಫೆ. ೧೬: ಭಾರತ ಸರ್ಕಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ರಾಷ್ಟಿçÃಯ ಯುವ ಸಂಸತ್ತು ೨೦೨೧-೨೨ ಪ್ರಯುಕ್ತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.

ಭಾಷಣ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತನಾಡಬೇಕು (ಕನ್ನಡ ಭಾಷೆ ರಾಜ್ಯ ಮಟ್ಟಕ್ಕೆ ಮಾತ್ರ). ಜಿಲ್ಲಾ ಮಟ್ಟದ ಸ್ಪರ್ಧೆಯು ವರ್ಚುವಲ್ ಮುಖಾಂತರ ನಡೆಯುತ್ತದೆ. ಇಲ್ಲಿ ಆಯ್ಕೆಯಾದವರು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಬಹುದು. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟç ಮಟ್ಟಕ್ಕೆ ಆಯ್ಕೆಯಾಗುತ್ತಾರೆ.

ರಾಷ್ಟç ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಬಹುಮಾನ ೨ ಲಕ್ಷ ರೂ., ದ್ವಿತೀಯ ಬಹುಮಾನ ರೂ.೧.೫೦ ಲಕ್ಷ ಹಾಗೂ ತೃತೀಯ ಬಹುಮಾನ ರೂ. ೧ ಲಕ್ಷ ಗಳಾಗಿದೆ. ಇಬ್ಬರಿಗೆ ಸಮಾಧಾನಕರ ಬಹುಮಾನ ವಾಗಿ ರೂ.೫೦ ಸಾವಿರಗಳನ್ನು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ರಾಷ್ಟç ಮಟ್ಟದ ಸ್ಪರ್ಧೆಯನ್ನು ದೆಹಲಿ ಪಾರ್ಲಿಮೆಂಟ್‌ನಲ್ಲಿ ಏರ್ಪಡಿಸ ಲಾಗಿದ್ದು, ಇಲ್ಲಿಗೆ ಹೋಗಲು ವಿಮಾನದ ಪ್ರಯಾಣ ಭತ್ಯೆ ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ೧೫ ರಿಂದ ೨೯ ವರ್ಷದ ಒಳಗಿನ ವಯೋಮಿತಿಯವರಾಗಿರಬೇಕು. ಭಾಷಣ ಸ್ಪರ್ಧೆಗೆ ಆಯ್ಕೆಯಾಗಲು ತಾವು ಮಾತನಾಡಿದ ೨ ನಿಮಿಷದ ವಿಡಿಯೋವನ್ನು ವ್ಯಾಟ್ಸ್ಪ್‌ನ ಮುಖಾಂತರ ಮೊಬೈಲ್ ಸಂಖ್ಯೆ ೯೯೬೧೩೩೨೯೬೮, ೯೦೧೯೫೮೧೦೯೭ ಅಥವಾ ಇ-ಮೇಲ್‌ಗೆ ಜಥಿಛಿ.ಞoಜಚಿgu @gmಚಿiಟ.ಛಿom ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತಾ. ೧೯ ರೊಳಗೆ ದೂ.ಸಂ. ೦೮೨೭೨-೨೨೫೪೭೦ ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಕೆ.ಕೆ.ಉಲ್ಲಾಸ್ ಅವರು ತಿಳಿಸಿದ್ದಾರೆ.