ಮಡಿಕೇರಿ, ಫೆ. ೧೬: ಜಿಲ್ಲೆಯವರಾದ ಪ್ರಸ್ತುತ ದೇಶದ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ನೇಮಕಗೊಂಡಿದ್ದಾರೆ. ದೇಶದ ಭೂ ಸೇನೆಯ ೩ನೇ ಅತ್ಯುನ್ನತ ಹುದ್ದೆ ಇದಾಗಿದ್ದು, ಚೀಫ್ ಆಫ್ ಆರ್ಮಿ ಸ್ಟಾಫ್ ಹಾಗೂ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ನಂತರ ಈ ಹುದ್ದೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಅತಿ ವಿಶಿಷ್ಟ ಸೇವಾ ಮೆಡಲ್ ಹಾಗೂ ವಿಶಿಷ್ಟ ಸೇವಾ ಮೆಡಲ್ಗೆ ಭಾಜನರಾಗಿರುವ ಬನ್ಸಿ ಪೊನ್ನಪ್ಪ ಅವರು ನೂತನ ಹುದ್ದೆಯ ಮೂಲಕ ಪ್ರತಿಷ್ಠಿತ ವಜ್ರಾ ಕಾರ್ಪ್ಸ್ನ ಕಮಾಂಡಿAಗ್ ವಹಿಸಲು ಅರ್ಹರಾಗಿರುತ್ತಾರೆ.
ಮೂಲತಃ ಜಿಲ್ಲೆಯ ನಾಂಗಾಲ ಗ್ರಾಮದವರಾದ ಬನ್ಸಿ ಪೊನ್ನಪ್ಪ ಅವರು, ೧೯೮೫ ನಲ್ಲಿ ಭಾರತೀಯ ಸೇನಾ ಅಕಾಡೆಮಿಯಿಂದ ಪದವಿ ಪಡೆದು ಮಹರ್ ರೆಜಿಮೆಂಟ್ನ ೨ನೇ ಬೆಟಾಲಿಯನ್ಗೆ ಕಮಿಷನ್ಡ್ ಆಗಿದ್ದರು. ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆದ ಕಲಹ ಸಂದರ್ಭ ಯುನೈಟೆಡ್ ನೇಷನ್ಸ್ನ ‘ಒಔಓUSಅಔ’ (ಯುನೈಟೆಡ್ ನೇಷನ್ಸ್ನ ಶಾಂತಿಪಾಲನೆ ದಳ)ದ ಕಮಾಂಡರ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು. ೨೦೧೯ ರ ಡಿಸೆಂಬರ್ನಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಹೊಂದಿದ ಇವರು ಇದೀಗ ಭೂ ಸೇನೆಯ ಡೆಪ್ಯುಟಿ ಚೀಫ್ ಆಗಿ ನೇಮಕಗೊಂಡಿದ್ದಾರೆ.