*ಗೋಣಿಕೊಪ್ಪ, ಫೆ. ೧೪: ಪೊನ್ನಂಪೇಟೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಬೀರು ಹಾಗೂ ಮೇಜುಗಳನ್ನು ಉದಾರವಾಗಿ ನೀಡಲಾಯಿತು.
ಶಿಕ್ಷಕಿ ಜಯಂತಿ ಅವರ ಸಹೋದರಿ ಕೋಡಿಮಣಿಯಂಡ ಉಮಾ ಬಿದ್ದಯ್ಯ ಅವರ ಜ್ಞಾಪಕಾರ್ಥವಾಗಿ ೧೦ ಸಾವಿರ ಮೌಲ್ಯದ ಟೇಬಲ್ ಹಾಗೂ ಗೊದ್ರೇಜನ್ನು ನೀಡಿದರು.
ಈ ಸಂದರ್ಭ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪೊನ್ನಂಪೇಟೆ ಪ್ರಧಾನ ಕಾರ್ಯದರ್ಶಿ ವಾಮನ ಹಾಗೂ ಇತರರು ಇದ್ದರು.