ಗೋಣಿಕೊಪ್ಪಲು, ಫೆ. ೧೪: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದ ಹಿಂದೆ ನಡೆದ ಪ್ರೇಮ ಕೊಲೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಜಾತ್ಯಾತೀತ ಜನತಾದಳ ಪಕ್ಷದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಪರ್ಮಾಲೆ ಎಂ. ಗಣೇಶ್ ಒತ್ತಾಯಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಪ್ರೇಮಾ ಎಂಬ ಮಹಿಳೆಯನ್ನು ಅಮಾನುಷವಾಗಿ ಕೊಲೆಗೈಲಾಗಿದೆ. ಇನ್ನೂ ಕೂಡ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಕೊಲೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದಾಗಿದೆ, ಕೊಲೆ ಪ್ರಕರಣದ ಸಿಒಡಿ ತನಿಖೆ ನಡೆಸಿದರೆ ಸತ್ಯಾಂಶವನ್ನು ಕಂಡುಹಿಡಿಯ ಬಹುದಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮವಹಿಸಲು ಗಣೇಶ್ ಒತ್ತಾಯಿಸಿದ್ದಾರೆ.