ಮಡಿಕೇರಿ, ಫೆ. ೧೪: ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ಗ್ರಾಮಗಳ ವಾರ್ಡ್ ಸಭೆ ತಾ.೧೮ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮುಕ್ಕೋಡ್ಲು ಸೇತುವೆ ಪಕ್ಕದ ಅಂಗನವಾಡಿ ಕಟ್ಟಡದಲ್ಲಿ ಹಾಗೂ ಹೆಮ್ಮೆತ್ತಾಳು ಹಾಗೂ ಮಕ್ಕಂದೂರು ಗ್ರಾಮಗಳ ವಾರ್ಡ್ ಸಭೆ ಮಧ್ಯಾಹ್ನ ೨.೩೦ ಗಂಟೆಗೆ ಮಕ್ಕಂದೂರು ಗ್ರಾ.ಪಂ. ಕಚೇರಿಯಲ್ಲಿ ನಡೆಯಲಿದೆ.
ಗ್ರಾಮ ಸಭೆ: ೨೦೨೧-೨೨ನೇ ಸಾಲಿನ ಗ್ರಾಮ ಸಭೆಯು ತಾ. ೨೨ ರಂದು ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನೋಡಲ್ ಅಧಿಕಾರಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜಶೇಖರ್ ಸಿ.ಯಡಾಳ್ ಭಾಗವಹಿಸುವರು ಎಂದು ಅಭಿವೃದ್ಧಿ ಅಧಿಕಾರಿ ದಿನೇಶ್ ತಿಳಿಸಿದ್ದಾರೆ.