ಚೆಟ್ಟಳ್ಳಿ, ಫೆ. ೧೪: ಸೈನಿಕರು ಹಾಗೂ ಮಾಜಿ ಸೈನಿಕರು ಹಾಗೂ ಸೈನಿಕರ ವಿಧವಾ ಮಹಿಳೆಯರ ಸ್ವಂತ ವಾಸದ ಮನೆಗಳಿಗೆ ಶೇ. ೫೦ ರಷ್ಟು ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದ್ದರೂ ವಿನಾಯಿತಿ ಪಡೆÀಯಲು ಸಾಧ್ಯವಾಗದ ಹಿನ್ನೆಲೆ ವೈಯಕ್ತಿಕವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘÀ ಅಧ್ಯಕ್ಷ ಕೊಟ್ಟ್ಟುಕತ್ತಿರ ಪಿ. ಸೋಮಣ್ಣ ಸಂಬAಧಪಟ್ಟ ಮೇಲಾಧಿಕಾರಿಗಳಿಗೆ ಲಿಖಿತ ಪತ್ರದ ಮೂಲಕ ತಿಳಿಸಿದ ಫಲವಾಗಿ ಸರಕಾರಿ ಆದೇಶದಂತೆ ಇದೀಗ ಗ್ರಾಮ ಪಂಚಾಯಿತಿಯಲ್ಲಿ ಯೋಧರ ಕುಟುಂಬಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

೨೦೧೨ರ ಕರ್ನಾಟಕ ಕಾಯ್ದೆ ನ. ೧೯ (ಗೆÀಝೆಟ್) ಪ್ರಕಾರ ಹಾಲಿ ಹಾಗೂ ಮಾಜಿ ಸೈನಿಕರಿಗೆ ಮುನಿಸಿಪಲ್ ಕೌನ್ಸಿಲ್ ಸ್ವಂತ ಬಳಕೆಯಲ್ಲಿರುವ ಮನೆಗಳಿಗೆ ಶೇ. ೫೦ ಕಂದಾಯ ರಿಯಾಯಿತಿ ಘೋಷಿಸಿದ್ದರು. ಅದರಂತೆ ೨೦೧೩ರಲ್ಲಿ ಸೋಮಣ್ಣ ಅವರು ಗ್ರಾಮ ಪಂಚಾಯಿತಿಯಲ್ಲಿ ಸಂಪರ್ಕಿಸಿದಾಗ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ವಿನಾಯಿತಿ ಕೊಡಲು ಆಗುವುದಿಲ್ಲ ಎಂಬ ಕಾರಣ ನೀಡಿ ಯೋಧನ ಕುಟುಂಬಕ್ಕೆ ಈ ಸೌಲಭ್ಯವನ್ನು ನೀಡÀಲಿಲ್ಲ. ಮೇಲಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನಕಾರಿಯಾಗಲಿಲ್ಲ. ತಾ. ೪.೩.೨೦೧೫ರಲ್ಲಿ ಮಡಿಕೇರಿಯ ಸೈನಿಕ ಕಲ್ಯಾಣ ಇಲಾಖೆೆಗೆ ಪತ್ರ ಬರೆದು ಅದರ ಪ್ರತಿಯನ್ನು ಸೈನಿಕ ಕಲ್ಯಾಣ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದರು. ಅರ್ಜಿಯನ್ನು ನಿರ್ದೇಶಕರು ಪತ್ರ ಸಂಖ್ಯೆ ಸೈ.ಕ.ಪು.ಇ/ಮನೆ ತೆರಿಗೆ/ ನಿಯಮ/ ೨೦೧೫ ದಿ.ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ) ಅವರಿಗೆ ಕಳುಹಿಸಿದ್ದು, ಅದರ ಪ್ರತಿಯನ್ನು ಸೋಮಣ್ಣನವರಿಗೂ ಕಳುಹಿಸಿದ್ದರು.

ಪತ್ರದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ವಾಸವಿರುವ ಎಲ್ಲಾ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಶೇ. ೫೦ ರಿಯಾಯಿತಿ ದೊರೆಯುತ್ತಿಲ್ಲ. ಈ ರಿಯಾಯಿತಿಯನ್ನು

(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಪಡೆಯಲು ಪಂಚಾಯತ್ ಆಕ್ಟ್ನಲ್ಲಿ ತಿದ್ದುಪಡಿ ಮಾಡುವ ಅವಶ್ಯಕ ಇದೆ. ನಿಯಮದಲ್ಲಿ ತಿದ್ದುಪಡಿ ಮಾಡುವಾಗ ಅವಕಾಶ ಕಲ್ಪಿಸಿಕೊಡಬೇಕೆಂದು ಯೋಧರ ಪರವಾಗಿ ಸೋಮಣ್ಣ ವಿನಂತಿಸಿದ್ದರು. ೨೦೧೬ರಲ್ಲಿ ರಾಜ್ಯಭವನದಲ್ಲಿ ಶಸಸ್ತçಪಡೆಗಳ ಧ್ವಜ ದಿನಾಚರಣೆಯಲ್ಲಿ ಶತ್ರುಸೈನಿಕರ ವಿರುದ್ಧ ಹೋರಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ರಾಜ್ಯಪಾಲರಾಗಿದ್ದ ವಜುಬಾಯಿವಾಲ ಅವರು ಹಾಜರಿದ್ದ ಸಭೆಯಲ್ಲಿ ಅಂದಿನ ಗೃಹಮಂತ್ರಿಗಳಾಗಿದ್ದ ಪರಮೇಶ್ವರ್, ಮಾಜಿ ಯೋಧರ ತೆರಿಗೆ ವಿನಾಯಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಗಣಿಸಲಾಗುವುದೆಂದು ಹೇಳಿಕೆ ನೀಡಿದ್ದರು. ಅದರಂತೆ ಸರ್ಕಾರವು ಅಧಿಸೂಚನೆ ಸಂಖೈ ಕೆ.ಪಿ.ಆರ್.ಸಿ-ಡಿ ಇಎ/೧೯೮/೨೦೨೧ ದಿ. ೨೮.೧೨.೨೦೨೧ರಲ್ಲಿ ಸೂಕ್ತ ತಿದ್ದುಪಡಿ ಮಾಡಿ ಗ್ರಾಮ ಪಂಚಾಯಿತಿಗಳಲ್ಲೂ ಅನ್ವಯಿಸುವಂತೆ ನಿರ್ದೇಶನ ನೀಡಿತ್ತು. ಇದರ ಸೌಲಭ್ಯವನ್ನು ಈಗ ಎಲ್ಲಾ ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವಾ ಮಹಿಳೆಯರ ಸ್ವಂತ ವಾಸದ ಕಟ್ಟಡಗಳಿಗೆ ಶೇ. ೫೦ ರಷ್ಟು ವಿನಾಯಿತಿ ಪಡೆಯುವಂತಾಯಿತು.

ಯೋಧರ ಕುಟುಂಬ ವಾಸದ ಕಟ್ಟಡಕ್ಕೆ ವಿನಾಯಿತಿ ಪಡೆಯಬೇಕೆಂದರೆ ಮಡಿಕೇರಿಯ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ಜಂಟಿ ನಿರ್ದೇಶಕರಿಂದ ಆದೇಶ ಪ್ರತಿ ಪಡೆದು ಸಂಬAಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ತೆರಿಗೆ ವಿನಾಯಿತಿ ಪಡೆಯಬೇಕಿದೆ. ಈ ಸರಕಾರದ ಆದೇಶದಿಂದ ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವಾ ಮಹಿಳೆಯರ ಅನುಕೂಲವಾಗಲಿದೆ. ಆದರೆ ಇನ್ನೂ ಗ್ರಾಮ ಪಂಚಾಯಿಗೆ ಆದೇಶವಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಸೈನಿಕ ಕಲ್ಯಾಣ ಇಲಾಖೆ ಹಾಗೂ ಸಂಬAಧಪಟ್ಟ ಅಧಿಕಾರಿಗಳು ತೆರಿಗೆ ವಿನಾಯಿತಿ ಆದೇಶವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಶೀಘ್ರದಲ್ಲಿ ನೀಡುವ ಮೂಲಕ ಯೋಧರ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೆ.ಪಿ. ಸೋಮಣ್ಣ ಒತ್ತಾಯಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ