ಕುಶಾಲನಗರ, ಫೆ. ೧೪: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಂ.ಎನ್. ಚಂದ್ರಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವನಿತಾ ಚಂದ್ರಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ೨೦೨೨- ೨೫ರ ಅವಧಿಯ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಉಪಾಧ್ಯಕ್ಷರಾಗಿ ರಾಜು ರೈ, ಖಜಾಂಚಿಯಾಗಿ ಕುಡೆಕಲ್ ಗಣೇಶ್, ಕಾರ್ಯದರ್ಶಿಯಾಗಿ ಕೆ.ಕೆ. ನಾಗರಾಜಶೆಟ್ಟಿ, ನಿರ್ದೇಶಕರುಗಳಾಗಿ ಶಿವರಾಜ್, ಮಹಮ್ಮದ್ ಮುಸ್ತಫಾ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಇರ್ಫಾನ್, ವೀಕ್ಷಕರಾಗಿ ಆನಂದ್ ಕೊಡಗು ಕಾರ್ಯನಿರ್ವಹಿಸಿದರು.