ಪೊನ್ನಂಪೇಟೆ, ಫೆ.೧೪: ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ನ ನಿರ್ವಹಣೆಯಲ್ಲಿರುವ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದೊಂದಿಗೆ ತಾ. ೧೬ ರಂದು (ನಾಳೆ) ಸಾರ್ವಜನಿಕರಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಬಾಳೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯಲಿರುವ ಈ ರಕ್ತದಾನ ಶಿಬಿರದ ಆಯೋಜನೆಯಲ್ಲಿ ಲಯನ್ಸ್ ಕ್ಲಬ್ ರಕ್ತನಿಧಿ ಕೇಂದ್ರ, ಜೀವಾಧರ ಮೈಸೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸರಗೂರು, ವನವಾಸಿ ಕಲ್ಯಾಣ ಕೊಡಗು, ಜೆಸಿಐ ಪೊನ್ನಂಪೇಟೆ ಗೋಲ್ಡನ್, ಮಡಿಕೇರಿ ಸ್ನೇಹಾಶ್ರಯ ಯೂತ್ ಟ್ರಸ್ಟ್ ಹಾಗೂ ಬಾಳೆಲೆ, ನಿಟ್ಟೂರು, ಕಿರುಗೂರು, ಮಾಯಮುಡಿ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿಗಳು ಸಹಭಾಗಿತ್ವ ನೀಡಲಿವೆ. ರಕ್ತದಾನ ಶಿಬಿರವು ಅಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ನಡೆಯಲಿದೆ. ರಕ್ತದಾನ ಮಾಡುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ ೯೭೩೧೪೬೩೭೩೪ ಅಥವಾ ೯೪೮೨೦೯೮೫೫೦ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.