ಮಡಿಕೇರಿ, ಫೆ.೧೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಭಕ್ತಿ ಪ್ರಧಾನವಾದ ಹಾಡುಗಳ ಸಿ.ಡಿಯೊಂದನ್ನು ಹೊರತರಲು ಉದ್ದೇಶಿಸಿದೆ. ಲಯಬದ್ಧವಾದ ೩-೪ ಚರಣಗಳಿಗೆ ಮೀರದಂತೆ ಕೊಡವ ಭಾಷೆಯಲ್ಲಿ ಬರೆದ ಭಕ್ತಿಗೀತೆಗಳನ್ನು ಕಳುಹಿಸಿಕೊಡಬಹುದು. ಅಕಾಡೆಮಿಯು ಆಯ್ದ ಗೀತೆಗಳನ್ನು ರಾಗ ಸಂಯೋಜಿಸಿ ಧ್ವನಿಮುದ್ರಿಸಿ ಹೊರತರಲಿದೆ. ಭಕ್ತಿಗೀತೆಗಳನ್ನು ಬರೆದು ಕಳುಹಿಸುವವರು ಅಕಾಡೆಮಿ ಇ-ಮೇಲ್: ಞoಜಚಿvಚಿ.ಚಿಛಿಚಿಜಚಿmಥಿ@ gmಚಿiಟ.ಛಿom ಗೆ ಅಥವಾ ಅಂಚೆ ಮುಖಾಂತರ ಅಥವಾ ಖುದ್ದಾಗಿ ಕಚೇರಿಗೆ ತಾ.೨೫ ರೊಳಗೆ ತಲುಪಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.೦೮೨೭೨-೨೨೯೦೭೪ ನ್ನುಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.