*ಗೋಣಿಕೊಪ್ಪ, ಫೆ. ೧೪: ಅಕ್ರಮವಾಗಿ ಸಾಗಿಸುತ್ತಿದ್ದ ೭ ಲಕ್ಷ ಮೌಲ್ಯದ ಬೀಟೆ ನಾಟಾಗಳನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಿತಿಮತಿ ಪಾಲಿಬೆಟ್ಟ ಮುಖ್ಯ ರಸ್ತೆಯಲ್ಲಿ ಈಚರ್ ವಾಹನದಲ್ಲಿ ಸುಮಾರು ೧೭ಕ್ಕೂ ಹೆಚ್ಚು ಮರದ ದಿಮ್ಮಿಗಳನ್ನು ಸಾಗಿಸುವ ಪ್ರಯತ್ನ ನಡೆದಿತ್ತು. ಮರಗಳನ್ನು ಸಾಗಿಸಲು ಮರದ ಮೇಲ್ಭಾಗಕ್ಕೆ ಕಾಫಿಯ ಹಸ್ಕ್ಗಳಿಂದ ಭದ್ರಪಡಿಸಲಾಗಿತ್ತು.

(ಮೊದಲ ಪುಟದಿಂದ) ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ೧೭ ನಾಟಾಗಳು ೫ ಲಕ್ಷ ಮೌಲ್ಯ ಹೊಂದಿದ್ದು, ನಾಟಾ ಸಾಗಿಸಲು ಬಳಸಿದ ವಾಹನದÀ ೨ ಲಕ್ಷ ರೂಪಾಯಿಗಳಂತೆ ಒಟ್ಟು ೭ ಲಕ್ಷ ಮೌಲ್ಯದ ಮರದ ನಾಟಾ ಹಾಗೂ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ದಾಳಿಯ ಸಂದರ್ಭ ವಾಹನದ ಚಾಲಕ ಮತ್ತು ಸಹಾಯಕ ಶಿಯಾಬ್ ಎಂಬ ವ್ಯಕ್ತಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯನ್ನು ವೀರಾಜಪೇಟೆ ವಿಭಾಗದ ಡಿ.ಸಿ.ಎಫ್ ಚಕ್ರಪಾಣಿ ವೈ, ಉಪವಿಭಾಗದ ಎ.ಸಿ.ಎಫ್ ಪಿ.ಪಿ. ಉತ್ತಪ್ಪ ಅವರ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಪಿ. ಹನುಗುಂದ ನೇತೃತ್ವದ ತಂಡದಲ್ಲಿ ಡಿ.ವೈ.ಆರ್‌ಗಳಾದ ಹಾಲೇಶ್, ಉಮಾಶಂಕರ್ ಎ.ಎಸ್, ವಾಹನ ಚಾಲಕರಾದ ರಮೇಶ್. ವಿ.ಎಂ, ಗಗನ್ ಬಿ.ಎ ಮತ್ತು ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.