ಸುಂಟಿಕೊಪ್ಪ, ಫೆ. 13: ಇಲ್ಲಿನ ಸೆಸ್ಕ್ ಶಾಖಾ ಕಚೇರಿಯಲ್ಲಿ ವಿದ್ಯುತ್ ಸೇವೇಗಳ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಿತು.

ಸುಂಟಿಕೊಪ್ಪ ಮತ್ತು ಮಾದಾಪುರ ಸೆಸ್ಕ್ ಶಾಖಾ ಕಚೇರಿ ವ್ಯಾಪ್ತಿಯ ಪ್ರಾಮಾಣಿಕ ಮತ್ತು ಇಲಾಖೆಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ಟಿ.ಆರ್. ಅನಿಲ್ ಕಂಬಿಬಾಣೆ, ಸೆಂಥಿಲ್ ನಾಥನ್ ಮತ್ತಿಕಾಡು, ಕೆ. ದಾಸನ್ ಮಾದಾಪುರ, ಎಸ್. ಗಿರೀಶ್ ಜಂಬೂರು ಬಾಣೆ, ಗರಗಂದೂರು ಪಿಡಬ್ಲ್ಯುಡಿ ಗುತ್ತಿಗೆದಾರ ಅಬ್ಬಾಸ್, ಮಂಜುನಾಥ್ ಸ್ವಾಮಿ ಗರಗಂದೂರು ಸುಬ್ರಮಣಿ ಹಾಲೇರಿ. 7 ಮಂದಿ ಗ್ರಾಹಕರನ್ನು ಸನ್ಮಾನಿಸಲಾಯಿತು. ಸುಂಟಿಕೊಪ್ಪ ಶಾಖೆಯ ಕಿರಿಯ ಅಭಿಯಂತರರಾದ ಎಸ್. ಜೈದೀಪ್, ಮಾದಾಪುರ ಶಾಖೆಯ ಕಿರಿಯ ಅಭಿಯಂತರ ವಿ. ಜಯ್ ಬಾದುರವಾಡೆ ಮತ್ತು ಕಚೇರಿಯ ಕಿರಿಯ ಸಹಾಯಕ ಬಿ.ವಿ. ಸುರೇಂದ್ರ ಇವರು ಸಭೆಯ ಉದ್ದೇಶ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.