ಗುಡ್ಡೆಹೊಸೂರು, ಫೆ. 12: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆ ಮತ್ತು ಗುಡ್ಡೆಹೊಸೂರು ಗ್ರಾ.ಪಂ ಸಮೀಪದಲ್ಲಿ ನೂತನವಾಗಿ ನವೀಕರಣಗೊಂಡ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು.
ಈ ಸಂಧರ್ಭ ತಾ.ಪಂ. ಕಾರ್ಯನಿರ್ವಣಾಧಿಕಾರಿ ಜಯಣ್ಣ ಜಿಲ್ಲಾಪಂಚಾಯ್ತಿ ಉಪಕಾರ್ಯದರ್ಶಿ ಲಕ್ಷ್ಮೀ ಗುಡ್ಡೆಹೊಸೂರು ಗ್ರಾ.ಪಂ ಅಧ್ಯಕ್ಷೆ ನಂದಿನಿ,ಉಪಾಧ್ಯಕ್ಷೆ ಯಶೋಧ, ಮತ್ತು ಗ್ರಾ.ಪಂ. ಸರ್ವ ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶ್ಯಾಂ ತಮ್ಮಯ್ಯ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವೀಚಾರಕಿ ಸೌಮ್ಯ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಮಾತನಾಡಿ ಶಾಸಕರ ಸಹಕಾರದೊಂದಿಗೆ ಮತ್ತು ಗ್ರಾಮ ಪಂಚಾಯ್ತಿ ಆಡಳಿತಮಂಡಳಿ ಯವರ ಪ್ರಯತ್ನದಲ್ಲಿ ಉತ್ತಮ ಗ್ರಂಥಾಲಯ ನಿರ್ಮಾಣವಾಯಿತು ಎಂಬುದಾಗಿ ತಿಳಿಸಿದರು.
ಶಾಸಕರು ಮಾತನಾಡಿ ಸ್ಥಳೀಯ ಗ್ರಾಮಸ್ಥರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಅಲ್ಲದೆ ಇನ್ನೂ ಮುಂದೆ ಗ್ರಾಮ 1 ಯೋಜನೆಯಡಿ ವಿವಿಧ ದಾಖಲಾತಿಗಳು ಗ್ರಾಮ ಪಂಚಾಯ್ತಿಯಲ್ಲೆ ದೊರೆಯಲಿದೆ ಎಂದು ವಿವರಿಸಿದರು.
-ಕುಡೆಕ್ಕಲ್ ಗಣೇಶ್