ಮಡಿಕೇರಿ, ಫೆ. 12: ಸಂಘಟನೆಗಳು ತನ್ನ ಸಮುದಾಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದರೆ ಸದೃಢವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಿತಿಯ ಜಿ¯್ಲÁ ನಿರ್ದೇಶಕ ಎ. ಯೋಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 21-22ನೇ ಸಾಲಿನ ಗ್ರಾಮಕಲ್ಯಾಣ ಯೋಜನೆ ಕಾರ್ಯಕ್ರಮದಡಿ ತಾಳತ್ತಮನೆಯಲ್ಲಿ ನಿರ್ಮಾಣವಾಗುತ್ತಿರುವ ಕೊಡಗು ಜಿ¯್ಲÁ ಮರಾಠ-ಮರಾಟಿ ಸಮಾಜ ಸೇವ ಸಂಘದ ಸಭಾಭವನದ ಪ್ರಗತಿ ಪರಿಶೀಲನೆ ನಡೆಸಿ ಸಹಾಯಧನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿz್ದÁರೆ. 50 ಲP್ಷÀ ಕುಟುಂಬಕ್ಕೆ ಆಶ್ರಯ ನೀಡಿz್ದÁರೆ. ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿz್ದÁರೆ. ಹಿಂದೂ ರುದ್ರಭೂಮಿ ಅಭಿವೃದ್ಧಿ, ಶಾಲೆಗಳಿಗೆ ಬೆಂಚು ಸೌಲಭ್ಯ ಇತ್ಯಾದಿ ರೀತಿಯಲ್ಲಿ ಸಹಾಯ ಮಾಡುತ್ತಿz್ದÁರೆ. ಅದೇ ರೀತಿ ಸಂಘದ ಮನವಿ ಆಲಿಸಿ 3 ಲP್ಷÀ ಸಹಾಯಧನದ ಮಂಜೂರಾತಿ ಪತ್ರ ನೀಡಿz್ದÁರೆ ಎಂದು ತಿಳಿಸಿದರು.
ಸಭಾಭವನ ನಿರ್ಮಾಣಕ್ಕೆ ತಮ್ಮ ಸಮುದಾಯದ ದಾನಿಗಳು ಸಹಾಯಧನ ನೀಡಿರುವುದು ಹೆಮ್ಮೆಯ ವಿಚಾರ. ಜತೆಗೆ ಎಂಎಲ್ಎ, ಎಂಎಲ್ಸಿ ನಿಧಿಯಿಂದ ಹಣ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯಧನದೊಂದಿಗೆ ಸಭಾಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿ¯್ಲÁ ಮರಾಠ-ಮರಾಟಿ ಸಮಾಜ ಸೇವ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ವಹಿಸಿದ್ದರು. ಈ ಸಂದರ್ಭ ಸಮಿತಿಯ ಯೋಜನಾಧಿಕಾರಿ ಸಿ.ಹೆಚ್. ಪದ್ಮಯ್ಯ, ಮೇಲ್ವಿಚಾರಕ ಕೆ. ಹರೀಶ್, ಸೇವಾ ಪ್ರತಿನಿಧಿ ಟಿ. ಸಾಜು, ಜಿಲ್ಲಾ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ್, ಕಟ್ಟಡ ಸಮಿತಿ ಅಧ್ಯಕ್ಷ ಗುರುವಪ್ಪ, ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ. ದೇವಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮಂಜರಿ, ಕಾಂತಿ ಯೋಗೇಂದ್ರ, ಹೂವಮ್ಮ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.