ಸುಂಟಿಕೊಪ್ಪ, ಫೆ. 12: ಇಲ್ಲಿನ ನಾಡ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಾಲೂಕು ತಹಶೀಲ್ದಾರರಾದ ಮಹೇಶ್ ಅವರು 22 ಮಂದಿ ಹಿರಿಯ ನಾಗರಿಕರಿಗೆ ಅರ್ಹತಾ ಪತ್ರವನ್ನು ವಿತರಿಸಿದರು.

ಸುಂಟಿಕೊಪ್ಪ ಉಪತಹಶೀಲ್ದಾರ್ ಶಿವಪ್ಪ, ಕಂದಾಯ ಪರಿವೀಕ್ಷಕ ಪ್ರಶಾಂತ್ ಗ್ರಾಮಲೆಕ್ಕಿಗರಾದ ನಾಗೇಂದ್ರ, ರೂಪಶ್ರೀ, ನಸೀಮ ಗ್ರಾಮ ಸಹಾಯಕರು ಮತ್ತಿತರರು ಇದ್ದರು.