ಸಿದ್ದಾಪುರ, ಫೆ. 13: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಬಾರ್ಡ್ ಹಾಗೂ ಓಡಿಪಿ ಸಂಸ್ಥೆ ಮೈಸೂರು ಸಹಯೋಗದಲ್ಲಿ ಗ್ರಾಮ ಮಟ್ಟದ ಜಾಗೃತಿ ಕಾರ್ಯಕ್ರಮವು ಪಾಲಿಬೆಟ್ಟದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಓಡಿಪಿ ಸಂಸ್ಥೆಯ ಮುಖ್ಯಸ್ಥ ಫಾದರ್ ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ರವರು ಮಾತನಾಡಿ ನಬಾರ್ಡ್ ಸಂಸ್ಥೆ ಪ್ರಾರಂಭಗೊಂಡಿದ್ದು ಬಡವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಬಡವರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖಾಧಿಕಾರಿ ಅನಿಲ್ ಕಾರ್ಮಿಕ ಇಲಾಖೆಯ ವತಿಯಿಂದ ಇ-ಶ್ರಮ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಗ್ರಾ.ಪಂ. ಪಿಡಿಓ ವಿಶ್ವನಾಥ್ ಸದಸ್ಯರುಗಳಾದ ಪುಲಿಯಂಡ ಬೋಪಣ್ಣ ಓಡಿಪಿ ಯೋಜನಾ ಅಧಿಕಾರಿ ಗೀತಾಮಿತ್ರ, ಸಂಯೋಜಕರಾದ ಮೋಳಿ, ಜಿಲ್ಲಾ ಸಂಯೋಜಕಿ ಜಾಯ್ಸಿ ಮೆನೇಜಸ್ ಹಾಗೂ ಓಡಿಪಿ ಸಂಸ್ಥೆಯ ಪದಾಧಿಕಾರಿಗಳಾದ ಜಾನ್, ವಿಜಯನಾರಾಯಣ ಧನುಕುಮಾರ್ ನಳಿನಿ ಮಂಜುಳ ಇನ್ನಿತರರು ಹಾಜರಿದ್ದರು.