ಶನಿವಾರಸಂತೆ, ಫೆ. 13: ಪಟ್ಟಣದ ಶ್ರೀ ಮಂಜುನಾಥೇಶ್ವರ ಪಾದಯಾತ್ರೆ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 24ನೇ ವರ್ಷದ ಪಾದಯಾತ್ರೆಯನ್ನು ತಾ. 26 ರಿಂದ ಮಾ. 1 ರವರೆಗೆ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರಿಗಳು ತಾ. 26 ರಂದು ಬೆಳಿಗ್ಗೆ 8.30 ರೊಳಗೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣಪತಿ ದೇವಾಲಯಕ್ಕೆ ಬಂದು ಸೇರಬೇಕು. ದೇವರಿಗೆ ಪೂಜೆ ಸಲ್ಲಿಸಿ 9 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಶನಿವಾರಸಂತೆ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಹ್ಮಣ್ಯ, ಸುಬ್ರಹ್ಮಣ್ಯದಿಂದ ಎಡಕ್ಕೆ ಕಡಬ ರಸ್ತೆ, ಮಾರ್ದಾಳ, ಇಜಲಂಪಾಡಿ ಹೊಳೆ, ಕೊಕ್ಕಡ, ಸೌತಡ್ಕA ಮೂಲಕ ಧರ್ಮಸ್ಥಳ ತಲುಪುವುದು. ಕೋವಿಡ್-19 ಶಿಷ್ಟಾಚಾರವನ್ನು ಪಾದಯಾತ್ರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಾದಯಾತ್ರಾ ಸಮಿತಿ ವ್ಯವಸ್ಥಾಪಕರಾದ ಎ.ಡಿ. ಮೋಹನ್ ಕುಮಾರ್, ರಾಜು, ಸಿ.ಬಿ. ಜಯಪ್ಪಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊ. 9448919518, 9480701238 ಸಂಪರ್ಕಿಸಬಹುದಾಗಿದೆ.