ನಾಪೆÇೀಕ್ಲು, ಫೆ. 12: ಕೊಳ್ತಿಗೆ ಗ್ರಾಮದ ದುಗ್ಗಳ ತರವಾಡು ಮನೆಯಲ್ಲಿ ಐದು ವರ್ಷಕ್ಕೆ ಒಮ್ಮೆ ಜರಗುವ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮ ನಡಾವಳಿ ಉತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಪೂರ್ವಾಹ್ನ ಗಣಪತಿ ಹೋಮ, ಹರಿಸೇವೆ, ಸತ್ಯನಾರಾಯಣ ಪೂಜೆ ಜರುಗಿ ಪ್ರಸಾದ ವಿತರಿಸಲಾಯಿತು. ರಾತ್ರಿ ಪರಿವಾರ ದೈವಗಳ ಭಂಡಾರವೆತ್ತಿ ಪಾಷಾಣ ಮೂರ್ತಿ, ಕಲ್ಕುಡ ಪಂಜುರ್ಲಿ, ಜಾವತೆ, ವರ್ಣಾರ ಪಂಜುರ್ಲಿ ನೇಮ ನಡಾವಳಿ ಜರುಗಿ ಬೆಳಿಗ್ಗೆ ಧರ್ಮ ದೈವ, ರುದ್ರ ಚಾಮುಂಡಿ ನೇಮ ಭಕ್ತಿಯಿಂದ ನೆರವೇರಿತು. ಭಕ್ತಾದಿಗಳು ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೈವ-ದೇವರುಗಳ ಕೃಪೆಗೆ ಪಾತ್ರರಾಗಿ ಪುನೀತರಾದರು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಪ್ರಸಾದ ಪಡೆದಾಗ ದೈವ ಆಶೀರ್ವಾದ ಮಾಡಿ ಉತ್ತಮ ಜನಸೇವೆ ಮಾಡುತ್ತಿದ್ದು ಮುಂದೆ ಉನ್ನತ ಗೌರವ ಸ್ಥಾನಮಾನ ದೊರಕಲಿದೆ ಎಂದು ಭವಿಷ್ಯವಾಣಿ ಯೊಂದಿಗೆ ಶುಭ ಹಾರೈಕೆ ಸಾಕ್ಷಿಯಾಯಿತು. ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಪ್ರತಿ ಧರ್ಮಕ್ಕೂ ಅದರÀದೇ ಆದ ಆಚಾರ ವಿಚಾರ ಇದ್ದು ಅದು ಮನೆಯಲ್ಲಿಯೇ ಸೀಮಿತವಾಗಬೇಕು ಹೊರತು ಸಾರ್ವಜನಿಕ ಬಾಧಿತವಾಗಬಾರದು ಎಂದರು.