ಮಡಿಕೇರಿ, ಫೆ. 12: ಕೇರಳದ ಪಯ್ಯಾವೂರಿನಲ್ಲಿ ನಡೆಯುವ ಬೈತೂರಪ್ಪ ದೇವರ ಉತ್ಸವವು ತಾ. 20 ರಂದು ಆರಂಭವಾಗಿ ತಾ. 24ರವರೆಗೆ ನಡೆಯಲಿದೆ.

ಉತ್ಸವಕ್ಕೆ ಬರುವ ಕೊಡಗಿನ ಭಕ್ತಾದಿಗಳು ಕೋವಿಡ್ ನಿಯಮಾನುಸಾರ 72 ಗಂಟೆಗಳ ಆರ್‍ಟಿಪಿಸಿಆರ್ ಪರೀಕ್ಷೆ ಹಾಗೂ ಎರಡು ಕೊರೊನಾ ಲಸಿಕೆ ಹಾಕಿಸಿದ ಪ್ರತಿಯನ್ನು ತೆಗೆದುಕೊಂಡು ಬರಬೇಕೆಂದು ತಕ್ಕ ಮುಖ್ಯಸ್ಥರಾದ ಮುಂಡ್ಯೋಳಂಡ ಕುಟುಂಬದ ಪರವಾಗಿ ಪಯ್ಯಾವೂರಿನ ಟ್ರಸ್ಟಿ ಅಜಿತ್ ಸುಬ್ಬಯ್ಯ ತಿಳಿಸಿದ್ದಾರೆ.