
ಮಡಿಕೇರಿ, ಫೆ. 13: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಯೊಂದು ಕೆಸರಿನ ಗುಂಡಿಯಲ್ಲಿ ಬಿದ್ದು, ಮೇಲೆ ಬರಲು ಪರದಾಡಿದ ಘಟನೆ ದುಬಾರೆ ಸಮೀಪದ ಕಾಫಿತೋಟವೊಂದರಲ್ಲಿ ನಡೆದಿದೆ. ವಿಜಯ ಎಂಬವರು ಕಾಫಿತೋಟದ ನಡುವೆ ಇರುವ ಕೆಸರಿನ
(ಮೊದಲ ಪುಟದಿಂದ) ಗುಂಡಿಯಲ್ಲಿ ಬಿದ್ದು, ನಂತರ ಆನೆ ಮೇಲೆ ಬರಲು ಸಾಧ್ಯವಾಗದೆ ನಿತ್ರಾಣ ಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಎಆರ್‍ಎಫ್‍ಓ ಕನ್ನಂಡ ರಂಜನ್ ಅವರ ನೇತೃತ್ವದಲ್ಲಿ ಸಾಕಾನೆಗಳ ಸಹಾಯದಿಂದ ಮಧ್ಯಮ ವಯಸ್ಸಿನ ಹೆಣ್ಣಾನೆಯನ್ನು ಕೆಸರಿನಿಂದ ಮೇಲೆತ್ತಿ ನಂತರ ವೈದ್ಯ ಉಮಾಶಂಕರ್ ಅವರಿಂದ ಚಿಕಿತ್ಸೆ ಕೊಡಿಸಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ.