ಶ್ರೀಮಂಗಲ, ಫೆ. 12: ಪೂರ್ವಿಕರು ಹುಟ್ಟುಹಾಕಿದ ಅಲಿಖಿತ ಸಂವಿಧಾನದಂತಹ ಪದ್ಧತಿ ಪರಂಪರೆ ಹಾಗೂ ಆಚರಣೆಗಳನ್ನು ನಾವು ಅರ್ಥಪೂರ್ಣವಾಗಿ ಮುನ್ನಡೆಯ ಬೇಕಾಗಿದೆ. ಕೊಡವಾಮೆ ಎಂದರೆ ಕೊಡವ ಜನಾಂಗದ ಅಸ್ತಿತ್ವವಾಗಿದೆ, ಮಣ್ಣು-ಮನಸ್ಥಾನ ಸಾಮಾಜಿಕ ಅಸ್ತಿತ್ವವಾದರೆ, ಆಯಿಮೆ-ಕೊಯಿಮೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವವಾಗಿದೆ. ಹಾಗೆಯೇ ಒಕ್ಕಾಮೆ-ತಕ್ಕಾಮೆ ಎಂಬುದು ರಾಜಕೀಯ ಅಸ್ತಿತ್ವವಾಗಿದೆ ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ವ್ಯಾಖ್ಯಾನಿಸಿದರು.
ಟಿ.ಶೆಟ್ಟಿಗೇರಿ ಗ್ರಾಮದ ಕಳ್ಳಿಚಂಡ ಸುದೀಶ್ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಯುಕೊ ಸಂಘಟನೆಯ ವತಿಯಿಂದ ನಡೆದ 3ನೇ ವರ್ಷದ ಬೇದ ಚಂಗ್ರಾಂದಿ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಮೂಲತಃ ಭತ್ತದ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕೊಡವರು ಭೂಮಿಯೊಂದಿಗೆ ಅತ್ಯಂತ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರು. ಕಾಲಾಂತರದಲ್ಲಿ ಆಧುನಿಕತೆಯ ಪ್ರಭಾವ, ಸ್ಥಿತ್ಯಂತರದ ಹೊಡೆತಕ್ಕೆ ಸಿಲುಕಿ ಕೊಡವರು ಭತ್ತದ ಕೃಷಿಯನ್ನು ಕಡೆಗಣಿಸಿ ವ್ಯವಹಾರಿಕ ಬೆಳೆಯಾದ ಕಾಫಿಯನ್ನು ಅವಲಂಭಿತ ರಾಗತೊಡಗಿದಾಗ ಭೂಮಿಯೆಡೆಗಿನ ಭಾವನಾತ್ಮಕ ಸಂಬಂಧಗಳು ಹಂತ ಹಂತವಾಗಿ ತನ್ನ ಬೆಸುಗೆಯನ್ನು ಕಳಚಿಕೊಳ್ಳತೊಡಗಿದವು. ಈ ಹಿನ್ನೆಲೆಯಲ್ಲಿ ಬೆÉೀದಚಂಗ್ರಾಂದಿಯೆಂಬ ಭಾವನಾತ್ಮಕ ಆಚರಣೆಯೂ ಸಹ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗಿ ನಿಂತಿದೆ.
ಈ ಹಿನ್ನೆಲೆಯಲ್ಲಿ ತನ್ನ ಬದುಕನ್ನೇ ಕೃಷಿಯೊಂದಿಗೆ ಅರ್ಪಿಸಿಕೊಂಡಿರುವ ಕೊಡವರ ಸಾಂಪ್ರದಾಯಿಕ 6 ಹಬ್ಬಗಳಲ್ಲಿ
(ಮೊದಲ ಪುಟದಿಂದ) ಒಂದಾದ ಮೊದಲನೆಯ ಹಬ್ಬ ಬೆÉೀದ ಚಂಗ್ರಾಂದಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲು ಯುಕೊ ಸಂಘಟನೆಯು ಮುಂದಾಗಿದೆ ಎಂದು ಅವರು ತಿಳಿಸಿದರು.
ಕೊಡವರು ಭೂಮಿ ಹಾಗೂ ಪ್ರಕೃತಿಯೊಂದಿಗೆÉ ತನ್ನ ಸಂಬಂಧವನ್ನು ಕಡಿದುಕೊಂಡು ದೂರವಾದಂತೆಲ್ಲಾ ಮಾನವೀಯ ಮೌಲ್ಯವನ್ನು ಕಳೆದುಕೊಂಡು ಮೌಢÀ್ಯತೆಯಡೆಗೆ ಸಾಗುತ್ತಾನೆ. ಇದರಿಂದ ತನ್ನ ಭೌತಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ನೆಲೆಗಟ್ಟನ್ನು ಕಳೆದುಕೊಂಡು ವಿನಾಶದೆಡೆಗೆ ಸಂಚರಿಸುವಂತಾಗಿದೆ. ಕೊಡವರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ, ಆಧುನಿಕತೆಯ ಭರಾಟೆಯಲ್ಲಿ ಗತಕಾಲದ ಮಹತ್ವವನ್ನು ಕಳೆದುಕೊಂಡಿದ್ದ ಕೊಡವರ ಹಾಗೂ ಭೂಮಿಯ ನಡುವಿನ ಭಾವನಾತ್ಮಕ ಬೆಸುಗೆಯ ಪಾರಂಪರಿಕ ಆಚರಣೆಯಾದ “ಬೇದ ಚಂಗ್ರಾಂದಿ” ಹಬ್ಬವನ್ನು ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ವತಿಯಿಂದ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ ಎಂದು ಮಂಜು ಚಿಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಭಾವಹಿಸಿದ ತೇಲಪಂಡ ಶಿವಕುಮಾರ್ ನಾಣಯ್ಯ, ಮಾದೇಟಿರ ತಿಮ್ಮಯ್ಯ ಮತ್ತು ಅಲ್ಲಾರಂಡ ಬೀನಾ ಬೊಳ್ಳಮ್ಮ ಅವರು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕಳ್ಳಿಚಂಡ ಸುದೀಶ್ ಉತ್ತಪ್ಪ ಅವರ ಮನೆಯಲ್ಲಿ ನೆಲ್ಲಕ್ಕಿಯಲ್ಲಿ ‘ತಪ್ಪಡಕ’ ಕಟ್ಟಿ ಪ್ರಾರ್ಥಿಸುವುದರೊಂದಿಗೆ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆನಂತರ ಕೃಷಿಭೂಮಿಗೆ ಸಾಂಪ್ರದಾಯಿಕ ತಳಿಯತಕ್ಕಿ ಬೊಳ್‍ಕ್‍ನೊಂದಿಗೆ ಸಾಂಸ್ಕøತಿಕ ಉಡುಪಿನಲ್ಲಿ ತೆರಳಿದ ಮಹಿಳೆಯರು ಸೂರ್ಯನಿಗೆ ನಮಸ್ಕರಿಸಿ ಬೇದಚಂಗ್ರಾಂದಿಯ ಆಚರಣೆಯಾಗಿ ಸೂರ್ಯನಿಗೆ ಅಕ್ಷತೆ ಪ್ರೋಕ್ಷಣೆ ಮಾಡಿ “ಭೂಮಿತಾಯಿ ನೀಡ ಉಟ್ಟಿ ಮಂಡೆ ಕಾಂಜದ್ ತಂಪಾಡ್, ಕುಂಬ್ಯಾರ್‍ಲ್ ಮಳೆಯಾಯಿತ್ ಕುಂದ್‍ಲ್ ಬೊಳೆಯಾಡ್” ಎಂದು ಪ್ರಾರ್ಥಿಸಿ ಪದ್ಧತಿಯಂತೆ ಭೂಮಿಗೆ ಎಣ್ಣೆಯನ್ನು ಸುರಿದು ಅಲ್ಲಿ ಮರದ ಬಾಚಣಿಕೆ ಹಾಗೂ ಮಿಳ್ಳಿಯಲ್ಲಿ ನೀರನಿಟ್ಟು ಪೂಜಿಸಲಾಯಿತು. ನಂತರ ತಾಪಂಡ ಐನ್‍ಮನೆಯಲ್ಲಿ ಸಭಾಕಾರ್ಯಕ್ರಮ ನಡೆಸಿ ಬೇದಚಂಗ್ರಾಂದಿಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ನಂತರ ಬೇದಚಂಗ್ರಾಂದಿಯ ವಿಶೇಷತೆಯ ಖಾದ್ಯಗಳೊಂದಿಗೆ ಸಾಮೂಹಿಕವಾದ ಪ್ರಸಾದ ಬೋಜನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘಟನೆಯ “ನಾಡ ಮಣ್ಣ್ ನಾಡ್ ಕೂಳ್” ಯೋಜನಾ ನಿರ್ದೇಶಕಾರ ಚೆಪ್ಪುಡೀರ ಸುಜುಕರುಂಬಯ್ಯ, ಮದ್ರೀರ ಪ್ರಿನ್ಸ್, ನೆಲ್ಲಮಕ್ಕಡ ಮಾದಯ್ಯ, ಕಳ್ಳಿಚಂಡ ಸುಮಿ ರಾಬಿನ್, ಕಳ್ಳಿಚಂಡ ಉತ್ತಪ್ಪ, ದೀನಾ ಉತ್ತಪ್ಪ, ಪಾರುವಂಗಡ ರಿಸ್ತಾ ಚಂಗಪ್ಪ, ಮಚ್ಚಮಾಡ ರಮೇಶ್, ರೇಷÀ್ಮ ರಮೇಶ್, ಬೊಳ್ಳಚೆಟ್ಟಿರ ಮೈನಾ ಪ್ರಕಾಶ್, ಪಾಂಡಂಡ ಸ್ವಾತಿ ಗಣಪತಿ, ತೀತಿಮಾಡ ಬೋಸ್ ಅಯ್ಯಪ್ಪ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಕಳ್ಳಿಚಂಡ ದೇವಿಕ ನಂಜಪ್ಪ, ಕಾಂಡೇರ ರೂಪಕುಮಾರ್, ಕಡೇಮಾಡ ರೇಖಾ ದಿನೇಶ್, ಕಳ್ಳಿಚಂಡ ತೇಜಲ್ ತಂಗಮ್ಮ, ತನ್ವಿ ಉತ್ತಪ್ಪ, ಅಲ್ಲಾರಂಡ ತರುಣ್‍ತಮ್ಮಯ್ಯ ಮತ್ತಿತರರು ಹಾಜರಿದ್ದರು.