ಮಡಿಕೇರಿ, ಫೆ. 12: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. 13 ರಿಂದ (ಇಂದಿನಿಂದ) ಆರಂಭಗೊಳ್ಳಲಿದ್ದು, ತಾ. 23ರವರೆಗೆ ಜರುಗಲಿದೆ.
ತಾ. 13 ರಂದು (ಇಂದು) ರಾತ್ರಿ ಸಂಪ್ರದಾಯದಂತೆ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ತಾ. 14 ರಿಂದ ಪ್ರತಿದಿನ ಬೆಳಿಗ್ಗೆ 11 ರಿಂದ ನಿತ್ಯಪೂಜೆ, ಸಂಜೆ 7ಕ್ಕೆ ತೂಚಂಬಲಿ, ತಾ 15 ರಂದು ಬೆಳಿಗ್ಗೆ 5 ರಿಂದ ಉತ್ಸವ ಮೂರ್ತಿದರ್ಶನ ಜರುಗಲಿದೆ. ತಾ. 16 ರಂದು ಬೆ. 10 ಗಂಟೆಗೆ ಭಂಡಾರ ಬರುವುದು, ತಾ. 17 ಬೆಳಿಗ್ಗೆ 5 ಕ್ಕೆ ಇರುಬಳಕು, ಬೆ. 11ಕ್ಕೆ ಎಂದಿನಂತೆ ನಿತ್ಯಪೂಜೆ ತುಲಾಭಾರ ಜರುಗಲಿದೆ. ತಾ. 19-20 ರಂದು ಎಂದಿನ ಪೂಜಾ ಕೈಂಕರ್ಯದೊಂದಿಗೆ ಸಂಜೆ ಉತ್ಸವ ಮೂರ್ತಿದರ್ಶನ, ತಾ 21 ಹಾಗೂ 22 ರಂದು ಹರಕೆ ಬಳಕಿನ ಪ್ರಸಾದ ವಿತರಣೆ, ಇತರ ಪೂಜಾ ಕೈಂಕರ್ಯದೊಂದಿಗೆ ನಡೆಯಲಿದೆ. ತಾ. 22 ರಂದು ಬೆ. 5 ಗಂಟೆಗೆ ಇರುಬಳಕು
(ಮೊದಲ ಪುಟದಿಂದ) 11 ರಿಂದ ನಿತ್ಯಪೂಜೆ ಹರಕೆ ಬಳಕಿನ ಪ್ರಸಾದ ವಿತರಣೆ, ತುಲಾಭಾರ, ಸಂಜೆ 5 ಗಂಟೆಗೆ ನೆರಪು, ರಾತ್ರಿ 8ಕ್ಕೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ ಜರುಗಲಿದೆ.
ತಾ. 23 ರಂದು ಬೆಳಿಗ್ಗೆ 10 ರಿಂದ ನಿತ್ಯಪೂಜೆ, 12 ಗಂಟೆಗೆ ತುಲಾಭಾರ, ಅಪರಾಹ್ನ 3ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ 5ಕ್ಕೆ ಉತ್ಸವ ಮೂರ್ತಿದರ್ಶನ ದೇವರ ಅವಭೃತ ಸ್ನಾನ, ರಾತ್ರಿ ಮತ್ತೆ ಉತ್ಸವ ಮೂರ್ತಿ ದರ್ಶನ, ವಸಂತ ಪೂಜೆ ನಡೆಯಲಿದೆ. ತಾ. 24 ರಂದು ಕೊಡಿಮರ ಇಳಿಸುವ ಮೂಲಕ ಪ್ರಸಕ್ತ ವರ್ಷದ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.