ಸಂಪಾಜೆ, ಫೆ. 12: ನೆಹರು ಯುವ ಕೇಂದ್ರ ಗ್ರಾಮ ಪಂಚಾಯಿತಿ ಸಂಪಾಜೆ ಜಿಲ್ಲಾ ಯುವ ಒಕ್ಕೂಟ, ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಳೆ ನೀರು ಸಂಗ್ರಹ ಅಭಿಯಾನದ ಅಂಗವಾಗಿ ಜಾಗೃತಿ ಬೀದಿನಾಟಕ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಾಜೆ ಗೇಟ್, ಅರಮನೆ ತೋಟ, ಚೆಡಾವು ಅಂಗನವಾಡಿ ಕೇಂದ್ರದ ಬಳಿ ನಡೆಯಿತು.
ಸಂಪಾಜೆ ಗೇಟ್ ಬಳಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಚೆದ್ಕಾರ್ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅರಮನೆತೋಟ ಭಾಗದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಚೆಡಾವು ವಾರ್ಡಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಲ್. ಸುರೇಶ್ ಉದ್ಘಾಟಿಸಿದರು. ನಂತರ ನೇತಾಜಿ ಗೆಳೆಯರ ಬಳಗದ ಸದಸ್ಯರಿಂದ ಜಾಗೃತಿ ಬೀದಿನಾಟಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ಶಶಿಕುಮಾರ್ ಹೆಚ್.ಬಿ., ಉದ್ಭವ್ ಸಂಸ್ಥೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಪಿ. ಮಲ್ಲಿಕಾರ್ಜುನ, ಆರೋಗ್ಯ ನಿರೀಕ್ಷಕ ಅನಂತ್ ಕುಮಾರ್, ಸಮುದಾಯ ನಾಯಕ ಬಾಬು ಹೆಚ್.ಎಂ., ಕೊರಗಪ್ಪ ಹಾಗೂ ಯಶವಂತ ದೇವರಗುಂಡ, ಮಹಮ್ಮದ್ ಕುಂಞ, ಸುಂದರ ಹೆಚ್.ಬಿ, ತೀರ್ಥರಾಮ, ನಾರಾಯಣ, ಸಚಿನ್, ಪುನೀತ್, ಜೀವನ್, ವಶೇರ್ಂದ್ರ, ಶ್ರೀಧರ, ವಿತಿನ್, ಮಂಜು, ನಿರ್ದೇಶಕ ರವಿ ಪೆಲಾರ್ಂಪಾಡಿ, ಆಶಾ ಕಾರ್ಯಕರ್ತೆ ಸಾವಿತ್ರಿ, ನೆಹರೂ ಯುವ ಕೇಂದ್ರದ ಮಾಜಿ ರಾಷ್ಟ್ರೀಯ ಯುವ ಕಾರ್ಯಕರ್ತ ಸಂತೋಷ್‍ಕುಮಾರ್ ಭಾಗವಹಿಸಿದ್ದರು.