ಸಿದ್ದಾಪುರ, ಫೆ. 11: ಮನೆಯ ಆವರಣ ಗೋಡೆಯ ಒಳಗಿದ್ದ ವಿಷಪೂರಿತ 2 ಹಾವುಗಳನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ಸಿದ್ದಾಪುರದ ಹಳೆಯ ಸಿದ್ದಾಪುರದ ಪ್ರೌಢಶಾಲಾ ರಸ್ತೆಯ ಸಮೀಪವಿರುವ ಹರೀಶ್ ಎಂಬವರ ಮನೆಯ ಆವರಣ ಗೋಡೆಯಲ್ಲಿ ಎರಡು ವಿಷಪೂರಿತ ಹಾವುಗಳು ಇದ್ದವು. ಈ ಬಗ್ಗೆ ಹರೀಶ್ ಸುರೇಶ್ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸುರೇಶ್ ಜೆಸಿಬಿಯನ್ನು ತರಿಸಿ ಆವರಣ ಗೋಡೆಯನ್ನು ಕೆಡವಿ ನಂತರ 2 ಹಾವುಗಳನ್ನು ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು.