ಮಡಿಕೇರಿ, ಫೆ. 11: ಹೊಸದುರ್ಗ-ಪಾಣತ್ತೂರು, ಭಾಗಮಂಡಲ-ಮಡಿಕೇರಿ, ಚೇರ್ಕಳ-ಕಲ್ಲಡ್ಕ ಮಾರ್ಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲು ಈ ಹಿಂದೆಯೇ ಒಪ್ಪಿಗೆ ದೊರೆತಿದೆ. ಇದರನ್ವಯ ಯೋಜನಾ ವರದಿ ತಯಾರಿಸಿ ಅಂದಾಜು ರೂ. 2.7 ಕೋಟಿ ವೆಚ್ಚದ ಅಂದಾಜು ಮೊತ್ತ ತಯಾರಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ.
ಅಂದಾಜು ಮೊತ್ತವನ್ನು ಅನುಮೋದಿಸಿ ತ್ವರಿತವಾಗಿ ಹೆದ್ದಾರಿ ವಿಸ್ತರಣೆ ಮಾಡುವಂತೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷೆ ಅಲ್ಕಾ ಉಪಾಧ್ಯಾಯ ಅವರಿಗೆ ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಅಲ್ಕಾ ಅವರನ್ನು ಭೇಟಿಯಾದ ಸಿಂಹ ಸಾರ್ವಜನಿಕ ವಾಹನಗಳ ಸುಲಭ ಸಂಚಾರಕ್ಕಾಗಿ ವಿಳಂಬರಹಿತವಾಗಿ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿದರು.