ಸುಂಟಿಕೊಪ್ಪ, ಫೆ. ೧೦: ಸುಂಟಿಕೊಪ್ಪದ ಮಾರುಕಟ್ಟೆ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಪುರುಷ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದೆ.

ಈ ಬಗ್ಗೆ ಸಾರ್ವಜನಿಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಸುಂಟಿಕೊಪ್ಪ ಠಾಣಾಧಿಕಾರಿ ಸೇರಿದಂತೆ ಪೊಲೀಸರು ಸ್ಥಳ ಪರಿಶೀಲಿಸಿದಾಗ ಬೋಯಿಕೇರಿ ನಿವಾಸಿ ವೆಂಕಟೇಶ (೫೨) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ವ್ಯಕ್ತಿಯು ತೀವ್ರ ಪಾನಮತ್ತರಾಗಿದ್ದ ಎನ್ನಲಾಗಿದ್ದು, ಇದರಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಸುAಟಿಕೊಪ್ಪ ಪೊಲೀಸರು ಠಾಣಾಧಿಕಾರಿ ಮಂಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.